ಬೆಂಗಳೂರು :ಫೆಬ್ರವರಿ 09:ಏನಿಲ್ಲ, ಏನಿಲ್ಲ, ಕರಿ ಮಣಿ ಮಾಲೀಕ ನೀನಲ್ಲ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಖತ್ ಟ್ರೆಂಡ್ ಆಗಿದ್ದು .ಎಲ್ಲರ ಮೊಬೈಲ್ನಲ್ಲೂ, ಬಾಯಲ್ಲೂ ಈಗ ಅದೇ ಹಾಡು.
ಅದ್ರಲ್ಲೂ ಇನ್ಸ್ಟಾಗ್ರಾಮ್ ಓಪನ್ ಮಾಡಿದ್ರೆ ಈ ಸಾಂಗ್ ನದ್ದೇ ಹವಾ..ಉಪೇಂದ್ರ’ ಸಿನಿಮಾದ ಈ ಹಾಡಿನ ಕ್ರೇಝ್ ಎಷ್ಟರ ಮಟ್ಟಿಗೆ ಇದೆ ಅಂದ್ರೆ 25 ವರ್ಷಗಳು ಕಳೆದ್ರೂ ಹಾಡು ತನ್ನ ಬೇಡಿಕೆಯನ್ನು ಕಳೆದುಕೊಂಡಿಲ್ಲ.
‘ಕರಿಮಣಿ ಮಾಲಿಕ ನೀನಲ್ಲ’ ಸಾಲಂತೂ ಸಖತ್ ಟ್ರೆಂಡ್ ಆಗಿದೆ. ಈ ಕರಿಮಣಿ ಮಾಲೀಕ ಯಾರೆಂಬುದನ್ನು “ನಾನು ನಂದಿನಿ ಬೆಂಗಳೂರಿಗ್ ಬಂದೀನಿ ಖ್ಯಾತಿಯ ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿಕ್ಕಿಪೀಡಿಯಾ ವಿಕ್ಕಿ ಅವರದ್ದೇ ಶೈಲಿಯಲ್ಲಿ ಹೇಳಿದ್ದಾರೆ.
ಹಾಡು ಮುಂದುವರೆದಂತೆ ‘ರಾಹುಲ್ಲ’ ಟ್ರೆಂಡ್ ಸೃಷ್ಟಿಕರ್ತ ಚಂದ್ರು ಅವರ ‘ಚಟ-ಪಟ’, ‘ಒನ್ಸ್ ಮೋರ್ ಒನ್ಸ್ ಮೋರ್ ಅಂತಾ ಇರ್ಬೇಕು’ ಡೈಲಾಗ್ಗಳು ಸಹ ಕೇಳಿ ಬರುತ್ತವೆ. ವಿಕ್ಕಿಪೀಡಿಯಾ ಅವರ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದೆ. ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಕಮೆಂಟ್ಗಳನ್ನು ಮಾಡಿದ್ದಾರೆ.