ಉಡುಪಿ :ಫೆಬ್ರವರಿ 02 :ಪರ್ಯಾಯ ಶ್ರೀಪುತ್ತಿಗೆ ಮಠ ಶ್ರೀಕೃಷ್ಣ ಮಠ ವತಿಯಿಂದ ಫೆಬ್ರವರಿ 09 ಶುಕ್ರವಾರದಂದು ದಾಸಶ್ರೇಷ್ಠರಾದ ಶ್ರೀಪುರಂದರದಾಸರ ಆರಾಧನೆ ಆಚರಿಸಲ್ಪಡುತ್ತಿದ್ದು, ಈ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಫೆಬ್ರವರಿ 06, 07, 08 ರಂದು ಮಧ್ವಮಂಟಪದಲ್ಲಿ ಪುರಂದರವಿಠಲ ಅಂಕಿತವುಳ್ಳ ಕೀರ್ತನೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ನೋಂದಾಯಿಸಲಿಚ್ಛಿಸುವವರು ಫೆಬ್ರವರಿ 5ರೊಳಗೆ 94803 51106 ಸಂಪರ್ಕಿಸಬಹುದು
ಸ್ಪರ್ಧಾ ವಿವರ
* ವೈಯಕ್ತಿಕ (ಒಬ್ಬರು) ವಿಭಾಗ
* ಸಾಮೂಹಿಕ (10 ಜನ) ವಿಭಾಗ
ಸ್ಪರ್ಧಾವಿಜೇತರಿಗೆ ಪುರಂದರದಾಸರ ಆರಾಧನೆಯಂದು ಪರ್ಯಾಯ ಶ್ರೀಪಾದರು ಅನುಗ್ರಹಿಸಲಿರುವರು.