ನವದೆಹಲಿ :ಫೆಬ್ರವರಿ 01:ಲೋಕಸಭೆಯಲ್ಲಿ 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ.
2024ರ ಕೇಂದ್ರ ಸರ್ಕಾರದ ಬಜೆಟ್ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಅದರಲ್ಲೂ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಈ ಬಾರಿ ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಜೆಟ್ ಮಂಡಿಸಿದ ದೇಶದ ಮೊದಲ ಮಹಿಳೆಯಾಗಿದ್ದರೆ, ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್ ಅವರಾಗಿದ್ದಾರೆ.
ಸ್ವಾತಂತ್ರ್ಯ ಭಾರತದಲ್ಲಿ ಮಧ್ಯಂತರ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಾಗಿದ್ದಾರೆ. ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ಅವರು ಬ್ರೀಫ್ ಕೇಸ್‌ಗೆ ವಿದಾಯ ಹೇಳಿ ರಾಷ್ಟ್ರ ಲಾಂಛನ ಹೊಂದಿರುವ ಕೆಂಪು ಬಣ್ಣದ ಲೆಡ್ಜರ್ ರೂಪದಲ್ಲಿ ಬಜೆಟ್ ತರುವ ಪದ್ದತಿ ಆರಂಭಿಸಿದ್ದಾರೆ.