ಮಣಿಪಾಲ, ಜನವರಿ 31, 2024; ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ಯ ಪ್ರತಿಷ್ಠಿತ ಘಟಕವಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ [ಎಂಐಟಿ] ಮತ್ತು ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ನ ಡಿಲ್ಯಾಬ್ಸ್ ಇನ್ಕ್ಯುಬೇಟರ್ ಅಸೋಸಿಯೇಶನ್ ಮಹತ್ತ್ವದ ಸಹಭಾಗಿತ್ವವನ್ನು ಘೋಷಿಸಿದ್ದು ಎಂಡೂ ಸಂಸ್ಥೆಗಳು ಒಡಂಬಡಿಕೆಯ ಪತ್ರಕ್ಕೆ 30 ಜನವರಿ 2024 ರಂದು ಸಹಿ ಹಾಕಿವೆ. ಉದ್ಯಮ ಉಪಕ್ರಮ [ಸ್ಟಾರ್ಟ್ಅಪ್ಸ್] ಗಳನ್ನು ತಳಮಟ್ಟದಿಂದಲೇ ನಾವೀನ್ಯದ ಬೆಳವಣಿಗೆಗಳನ್ನು ಪ್ರೋತ್ಸಾಹಿಸುವುದು ಮತ್ತು ನವೀನ ಆವಿಷ್ಕಾರ ಈ ಸಹಭಾಗಿತ್ವದ ಉದ್ದೇಶಗಳಾಗಿವೆ.
ಎಂಐಟಿಯ ನಿರ್ದೇಶಕ ಕಮಾಂಡರ್ [ಡಾ.] ಅನಿಲ್ ರಾಣಾ ಅವರು, ಈ ಸಹಭಾಗಿತ್ವದ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, ‘ಇದು ಎಂಐಟಿಯ ವಿದ್ಯಾರ್ಥಿಗಳಿಗೆ ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ ಮತ್ತು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಆಸಕ್ತಿ ಅಧಿಕವಾಗುತ್ತಿದ್ದು, ಎಂಐಟಿಯು ಬಿ. ಟೆಕ್ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯಲ್ಲಿ ಐದು ವರ್ಷಗಳ ಸಮಗ್ರ ಅವಧಿಯ ಎಂ. ಟೆಕ್ ದ್ವಿಪದವಿ [ಇಂಟಗ್ರೇಟೆಡ್ ಡ್ಯುಯಲ್ ಡಿಗ್ರಿ] ಯನ್ನು ನೀಡುವ ಅವಕಾಶವನ್ನು ಹೊಂದಿದೆ. ಈ ಸಹಭಾಗಿತ್ವವು ಮಣಿಪಾಲದಲ್ಲಿ ಅಸ್ತಿತ್ವದಲ್ಲಿರುವ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ವರ್ಧಿಸುತ್ತದೆ, ವಿದ್ಯಾರ್ಥಿಗಳು ತಮ್ಮದೇ ಆದ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ’ ಎಂದು ಅವರು ವಿವರಿಸಿದರು.
ಡಿಲ್ಯಾಬ್ಸ್ ಇನ್ಕ್ಯುಬೇಟರ್ ಅಸೋಸಿಯೇಶನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸೌಮ್ಯ ಕುಮಾರ್ ಅವರು ಮಾತನಾಡಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನೊಂದಿಗಿನ ಈ ತಿಳಿವಳಿಕೆ ಒಪ್ಪಂದದ ಮಹತ್ವವನ್ನು ಒತ್ತಿ ಹೇಳಿದರು. ಈ ಮೈತ್ರಿಯು ಭಾರತದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಇದು ನವೀನ ಆಲೋಚನೆಗಳಿಗಾಗಿ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯನ್ನು ರಚಿಸಲು ಮತ್ತು ಉದಯೋನ್ಮುಖ ಉದ್ಯಮಿಗಳಿಗೆ ಅಧಿಕಾರ ನೀಡುವ ಗುರಿಯನ್ನು ಹೊಂದಿದೆ. ಪಾಲುದಾರಿಕೆಯು ಹಂಚಿಕೆಯ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಅನುಮತಿಸುತ್ತದೆ, ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಎರಡೂ ಸಂಸ್ಥೆಗಳ ಪಾತ್ರಗಳನ್ನು ಬಲಪಡಿಸುತ್ತದೆ
ಈ ಅದ್ಭುತ ಪಾಲುದಾರಿಕೆಯು ಎಂಐಟಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಬಲಪಡಿಸುವ ಮತ್ತು ಹೊಸತನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಶ್ರೀ ಸುರೇಶ ಕೆ ಬಂಡಿ, ಸಹ ಉಪಾಧ್ಯಕ್ಷರು ISB ನಲ್ಲಿ I-ವೆಂಚರ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಕುಲಸಚಿವರಾದ ಡಾ. ಪಿ. ಗಿರಿಧರ ಕಿಣಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್, ಮಾಹೆಯ ಪರೀಕ್ಷಾಂಗ ಕುಲಸಚಿವರಾದ ಡಾ. ವಿನೋದ್ ವಿ. ಥಾಮಸ್, ಎಂಐಟಿಯ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್, ಎಂಉಟಿಯ ಕೈಗಾರಿಕ ಸಂಪರ್ಕ ನಿಯೋಜನೆ ಮತ್ತು ಪ್ರಯೋಗಶಾಲೆ [ಇಂಡಸ್ಟ್ರಿ ಲಿಯಾಸನ್, ಪ್ಸೇಸ್ಮೆಂಟ್ ಆ್ಯಂಡ್ ಪ್ರಾಕ್ಟೀಸ್ ಸ್ಕೂಲ್] ಇದರ ಸಹನಿರ್ದೇಶಕರಾದ ಡಾ. ಶ್ರೀರಾಮ್ ಕೆ. ವಿ., ಮಾಹೆಯ ಮುಖ್ಯ ನಾವೀನ್ಯ ವಿಭಾಗದ ಅಧಿಕಾರಿ [ಚೀಪ್ ಇನ್ನೋವೇಶನ್ ಆಫೀಸರ್] ಗಳಾದ ಡಾ.ಮುಹಮ್ಮದ್ ಜುಬೇರ್, ಮಣಿಪಾಲ್-ಕರ್ನಾಟಕ ಸರ್ಕಾರ ಬಯೋ ಇನ್ಕ್ಯುಬೇಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಮನೇಶ್ ಥಾಮಸ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು