ಕಾರ್ಕಳ:ಜನವರಿ 31:ದೇವಸ್ಥಾನದ ನೀರಿನ ಟ್ಯಾಂಕಿ ಕುಸಿದು ಮೈಮೇಲೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟು ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಂದಳಿಕೆ ಗ್ರಾಮದ ಮಾವಿನಕಟ್ಟೆಯಲ್ಲಿ ಮಂಗಳವಾರ ಸಂಭವಿಸಿದೆ.
ನಂದಳಿಕೆ ಗ್ರಾಮದ ಮಾವಿನಕಟ್ಟೆಯ ಪುನೀತ್ ಎಂಬವರ ತಾಯಿ ಲತಾ ಮೊಯ್ಲಿ(50) ಮತ್ತು ತಂಗಿ ಪೂಜಾ ಮಂಗಳವಾರ ರಾತ್ರಿ ಮನೆಯ ಬಳಿಯಿರುವ ಮಹಮ್ಮಾಯಿ ದೇವಸ್ಥಾನ ವರ್ಷಾವಧಿ ಮಾರಿಪೂಜೆಗೆ ಹೋಗಿದ್ದರು. ರಾತ್ರಿ 10.30ರ ವೇಳೆಗೆ ಮಾರಿಪೂಜೆಯ ಅನ್ನದಾನದಲ್ಲಿ ಊಟ ಮಾಡಿ ಬಟ್ಟಲು ತೊಳೆಯಲು ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥೆ ಮಾಡಿದ್ದ ನಳ್ಳಿ ಹತ್ತಿರ ಹೋದಾಗ ಸಮೀಪದಲ್ಲೇ ನೆಲದ ಮಟ್ಟದಲ್ಲಿ ಸಿಮೆಂಟ್‌ನಿಂದ ನಿರ್ಮಿಸಿದ ನೀರಿನ ಟ್ಯಾಂಕಿ ಕುಸಿದು ಮೈಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಲತಾ ಮೊಯ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ನಲ್ಲಿ ಕುಳ್ಳಿರಿಸುವಾಗಲೇ ಮೃತಪಟ್ಟಿದ್ದಾರೆ. ಗರ್ಭೀಣಿಯಾಗಿರುವ ಲತಾ ಅವರ ಮಗಳು ಪೂಜಾ ಗಾಯಗೊಂಡಿದ್ದು, ಅವರು ಕಾರ್ಕಳದ ಟಿ.ಎಂ.ಎ. ಪೈ. ರೋಟರಿ ಆಸತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.