ಉಡುಪಿ : ಜನವರಿ 31:ದ್ರಶ್ಯ ನ್ಯೂಸ್ : ದಿನಾಂಕ: ಜನವರಿ 30ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ – ಸಂಜೀವಿನಿ ಇವರ ಆಶ್ರಯದಲ್ಲಿ ಲಖ್ ಪತಿ ದೀದಿ ಕಾರ್ಯಕ್ರಮದ ಅನುಷ್ಠಾನದ ಕುರಿತು ಸಂಜೀವಿನಿ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗಾಗಿ 2 ದಿನಗಳ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ. ಪ್ರತೀಕ್ ಬಾಯಲ್ ಉದ್ಘಾಟಿಸಿ, ಸರಕಾರದ ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಅನುಷ್ಟಾನವಾಗಬೇಕಾದರೆ ಕ್ಷೇತ್ರ ಮಟ್ಟದಲ್ಲಿ ಸೇವೆಸಲ್ಲಿಸುತ್ತಿರುವ ಸಿಬ್ಬಂದ್ದಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಸಂಜೀವಿನಿ ಸ್ವ ಸಹಾಯ ಗುಂಪುಗಳ ಮಹಿಳೆಯರ ಕುಟುಂಬಕ್ಕೆ ಸುಸ್ಥಿರ, ನಿರಂತರ, ಸಮಗ್ರ ಜೀವನೋಪಾಯದ ಪರಿಕಲ್ಪನೆಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಕೊಡುವ ಮಹತ್ವದ ಕಾರ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಂದ ಆಗಬೇಕಾಗಿದೆ. ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಂಡು; ಆರ್ಥಿಕ ಸಶಕ್ತೀಕರಣದತ್ತ ಸಾಗಲು ನೆರವಾಗುವವರು ಸಮುದಾಯ ಸಂಪನ್ಮೂಲ ವ್ಯಕ್ತಿಗಳು. ಆದ್ದರಿಂದ ಈ ತರಬೇತಿಯಲ್ಲಿ ಸಕ್ರೀಯಾವಾಗಿ ಪಾಲ್ಗೊಂಡು ಕ್ಷೇತ್ರಮಟ್ಟದಲ್ಲಿ ಗ್ರಾಮೀಣ ಮಹಿಳೆಯರನ್ನು ಲಖ್ ಪತಿ ದೀದಿಯನ್ನಾಗಿ ರೂಪುಗೊಳಿಸಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಜು ಮೊಗವೀರ, ಉಪ ಕಾರ್ಯಧರ್ಶಿಗಳು ಜಿಲ್ಲಾ ಪಂಚಾಯತ್ ಉಡುಪಿ, ಶ್ರೀ ಶ್ರೀನಿವಾಸ್ ರಾವ್, ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ಉಡುಪಿ, ಶ್ರೀ. ರಾಧಾಕೃಷ್ಣ ಅಡಿಗ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್ ಉಡುಪಿ, ಶ್ರೀ. ರಾಮ್ ದಾಸ್, ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ, ಸಂಜೀವಿನಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸಿಬ್ಬಂದ್ದಿಗಳು ಉಪಸ್ಥಿತರಿದ್ದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸುಮಂಗಲ, ಸಹನಾ ಕೆ ಹೆಬ್ಬಾರ್, ಮಾಲತಿ ಎಸ್ ನಾಯ್ಕ್ ಮಾಹಿತಿ ನೀಡಿದರು. ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯಾ ಕಾರ್ಯಕ್ರಮ ನಿರೂಪಿಸಿದರು.