ಉಡುಪಿ :ಜನವರಿ 31 : ನಿರಂತರ್ ಉದ್ಯಾವರ ನೇತೃತ್ವದಲ್ಲಿ 6ನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವವು ಇದೇ ಫೆಬ್ರವರಿ ಒಂದರಿಂದ ನಾಲ್ಕನೇ ತಾರೀಖಿನವರೆಗೆ ಸಂಜೆ ಗಂಟೆ 6:30ಕ್ಕೆ ಸರಿಯಾಗಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ (ಚರ್ಚ್ ವಠಾರ) ನಡೆಯಲಿದೆ.
ಫೆಬ್ರವರಿ 1, ಗುರುವಾರದಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇವರಿಂದ ಕ್ಲಾನ್ವಿನ್ ಫೆರ್ನಾಂಡಿಸ್ ಇವರ ನಿರ್ದೇಶನದ ರಂಗಗೀತೆಗಳು ಮತ್ತು ‘ಹ್ಯಾಂಗ್ ಆನ್’ (ಕನ್ನಡ), ಫೆಬ್ರವರಿ 2 ಶುಕ್ರವಾರದಂದು ಪ್ರಶಸ್ತಿ ಪುರಸ್ಕೃತ ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ತುಳು ನಾಟಕ ‘ಮರಣಗೆಂದಿನಾಯೆ’, ಫೆಬ್ರವರಿ 3 ಶನಿವಾರದಂದು ಅಸ್ತಿತ್ವ ಮಂಗಳೂರು ತಂಡದಿಂದ ‘ಜುಗಾರಿ’ (ಕೊಂಕಣಿ), ಮತ್ತು ಫೆಬ್ರವರಿ 4, ಭಾನುವಾರದಂದು ಲೋಗೋಸ್ ಥಿಯೇಟರ್ ಗ್ರೂಪ್ ಮಂಗಳೂರು ಇವರಿಂದ ‘ದಾದ್ಲ್ಯಾo ಮಧೆo ತುo ಸದೆoವ್’ ಎನ್ನುವ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಉಚಿತ ಪ್ರವೇಶವಿರುವ ಈ ನಾಟಕೋತ್ಸವವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.