ಬೆಂಗಳೂರು :ಜನವರಿ 30: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಪ್ರಸ್ತುತ ವಿವರಗಳನ್ನು ಸಲ್ಲಿಸುವ ಬಗ್ಗೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿಯಿರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡುವ ಸಂಬಂಧ ಆರ್ಥಿಕ ಇಲಾಖೆಯು 2023-24, 2024-25 ಹಾಗೂ 2025-26 ನೇ ಸಾಲಿಗೆ ವಾರ್ಷಿಕವಾಗಿ 500 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ.
ಎಲ್ಲ ಜಿಲ್ಲೆಗಳಲ್ಲಿ ಮಂಜೂರಾದ ಹುದ್ದೆಗಳು, ಪಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಗಳಿಗನುಗುಣವಾಗಿ ಪುಸಕ್ತ ಖಾಲಿಯಿರುವ 1820 ಹುದ್ದೆಗಳ ಪೈಕಿ 1000 ಹುದ್ದೆಗಳನ್ನು ನೇರನೇಮಕಾತಿಯಡಿ ಭರ್ತಿಮಾಡಿಕೊಳ್ಳಲು ಉದ್ದೇಶಿಸಲಾಗಿರುತ್ತದೆ.
ಕಂದಾಯ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಯ ಸಂಖ್ಯೆಗಳ (ನೇರ ನೇಮಕಾತಿ ಹಾಗೂ ಮುಂಬಡ್ತಿ ಹುದ್ದೆಗಳನ್ನು ಒಳಗೊಂಡಂತೆ) ಆಯಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಇದರೊಂದಿಗೆ ಲಗತ್ತಿಸಲಾದ ಅನುಬಂಧ-1ರ ಕಲಂ (06) ರಲ್ಲಿ ನೀಡಿರುವಂತೆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಇದರೊಂದಿಗೆ ಲಗತ್ತಿಸಿದ ಅನುಬಂಧ-2 ರಲ್ಲಿನ ಆಡಳಿತ ಸುಧಾರಣೆಯ ಆದೇಶ ಸಂಖ್ಯೆ: ಸಿಆಸುಇ 01 ಸಹಿಮೆ 2022 ದಿನಾಂಕ:28.12.2022 ಹಾಗೂ ಆದೇಶ ಸಂಖ್ಯೆ: ಸಿಆಸುಇ 02 ಸಹಿಮೆ 2023 ದಿನಾಂಕ:08.03.2023ರಲ್ಲಿ ಪುಸ್ತಾಪಿಸಿರುವಂತೆ ನಿಯಮಾನುಸಾರ ಎಲ್ಲ ವರ್ಗಗಳಿಗೂ ಅನ್ವಯವಾಗುವಂತೆ (ಸಾಮಾನ್ಯ ವರ್ಗ, ಪ.ಜಾ/ಪ.ಪಂ…ಇತ್ಯಾದಿ) ಮೊದಲನೇ ಬಿಂದುವಿನಿಂದ ಸ್ಥಳೀಯ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪ್ರತ್ಯೇಕವಾಗಿ ನೇರ ಮೀಸಲಾತಿ (Vertical Reservation) ಹಾಗೂ ಸಮತಳ ಮೀಸಲಾತಿಯನ್ನು (Horizontal Reservation) (ನೇರ ನೇಮಕಾತಿ ಹುದ್ದೆಗಳಿಗೆ) ತಃಖೆಯನ್ನು ಕೂಡಲೇ ಸಲ್ಲಿಸುವಂತೆ ಮಾಹಿತಿಯನ್ನು ಕೋರಲಾಗಿದೆ.