ಬೆಂಗಳೂರು :ಜನವರಿ 29:ಕನ್ನಡದ ಬಿಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರ (Bigg Boss Season 10) ಶೋ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿತ್ತು.
ಎಲ್ಲಾ ಬಿಗ್ ಬಾಸ್ (Bigg Boss) ಸೀಸನ್ಗಳಿಗಿಂತಲೂ ಈ ಹತ್ತರ ಸೀಸನ್ ಕೊಂಚ ವಿಭಿನ್ನವಾಗಿತ್ತು. ಜಗಳ, ವಿವಾದ, ಕಿತ್ತಾಟಗಳಿಂದ ಬಿಗ್ ಬಾಸ್ ಹೆಚ್ಚು ಸದ್ದು ಮಾಡಿತ್ತು. ಹೆಣ್ಣು ಮಕ್ಕಳು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಆಟವಾಡಿ ತೋರಿಸಿದ್ರು. ಫೈನಲಿಸ್ಟ್ ಲಿಸ್ಟ್ನಲ್ಲಿದ್ದ 6 ಮಂದಿ ಕೂಡ ಉತ್ತಮವಾಗಿಯೇ ಆಟವಾಡಿದ್ರು. ಈ ಬಾರಿ ಬಿಗ್ ಬಾಸ್ ಟ್ರೋಫಿಯನ್ನು ಕಾರ್ತಿಕ್ ಮಹೇಶ್ ಮುಡಿಗೇರಿಸಿಕೊಂಡಿದ್ದಾರೆ.