ಜನವರಿ 27:ಅಯೊಧ್ಯೆಯಲ್ಲಿ ಶುಕ್ರವಾರ ಸಂಜೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು .
ಶ್ರೀರಾಮಲಲ್ಲಾನ ವಿಗ್ರಹವನ್ನು ವಾದ್ಯಘೋಷ , ಶ್ರೀಗಳ ಶಾಸ್ತ್ರ ವಿದ್ಯಾರ್ಥಿಗಳ ವಿಷ್ಣುಸಹಸ್ರನಾಮ , ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆರವರಣದ ಸುತ್ತ ಒಂದು ಸುತ್ತು ತಂದ ಬಳಿಕ ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನಡೆಸಲಾಯಿತು.