ಉಡುಪಿ :ಜನವರಿ 26: ಕಟಪಾಡಿ-ಶಿರ್ವ ಮುಖ್ಯರಸ್ತೆಯ ಬಂಟಕಲ್ಲು ಅರಸೀಕಟ್ಟೆಯಬಳಿ ಗುರುವಾರ (ಜ.25ರಂದು) ರಾತ್ರಿ ಸುಮಾರು ಗಂಟೆ 10.15 ರ ವೇಳೆಗೆ ರಸ್ತೆಯಲ್ಲಿ ಬೈಕೊಂದು ಅಫಘಾತಕ್ಕೀಡಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಸವಾರ ದರ್ಶನ್ (24 ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತ ಬೈಕ್ ಸವಾರ ಮೂಲತಃ ಕಾರವಾರ ಕಡೆಯವನಾಗಿದ್ದು ಶಂಕರಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆ ಇದೇ ಯುವಕ ಬೈಕ್ ಅಫಘಾತದಲ್ಲಿ ಕೈ ಮೂಳೆ ಮುರಿತಕ್ಕೆ ಒಳಗಾಗಿ ಮನೆಯಲ್ಲಿದ್ದ ಎನ್ನಲಾಗಿದೆ.ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ.
ಯುವಕ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದು, ಅಫಘಾತದ ರಭಸಕ್ಕೆ ಮೃತನ ತಲೆಬುರುಡೆ ಒಡೆದು ಮೆದುಳು ಹೊರಕ್ಕೆ ಬಿದ್ದ ದೃಶ್ಯ ಭೀಕರವಾಗಿತ್ತು. ಶಿರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಂಬುಲೆನ್ಸ್ ವಾಹನದಲ್ಲಿ ಮೃತ ಶರೀರವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಶವಗಾರದಲ್ಲಿರಿಸಲಾಗಿದೆ.