ಉಡುಪಿ : ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಸಿದಂತೆ ಇದೀಗ ಉಡುಪಿ ಜಿಲ್ಲಾ ಪೋಕ್ಸೋ ವಿಶೇಷ ಕೋರ್ಟ್ ಆರೋಪಿ ಕಾಪು ತಾಲೂಕಿನ ಮಜೂರು ಗ್ರಾಮದ ನಿವಾಸಿ ಶಂಶುದ್ದೀನಗೆ 20 ವರ್ಷ ಕಠಿಣ ಶಿಕ್ಷೆ 62,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿಯು ಬಾಲಕಿಯನ್ನ ತನ್ನ ಆಟೋದಲ್ಲಿ ದಿನಾಲೂ ಶಾಲೆಗೆ ಕರೆದೊಯ್ಯುತ್ತಿದ್ದ ಎಂದು ಹೇಳಲಾಗುತ್ತಿದ್ದು, ಆಟೋದಲ್ಲಿ ಶಾಲೆಗೆ ಬಿಡುತ್ತಿದ್ದ ವೇಳೆ ವಿಡಿಯೋ ಮಾಡುತ್ತಿದ್ದ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿತ್ತು.
ನಂತರ ಬಾಲಕಿಗೆ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳುತ್ತಿಲಾಗುತ್ತಿದ್ದು, ಅಪ್ರಾಪ್ತ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ, ಲಾಡ್ಜ್, ರೆಸಾರ್ಟ್ ಗೆ ಕರೆದೋಯ್ದು ನಿರಂತರವಾಗಿ ಆಟೋ ಚಾಲಕ ಅತ್ಯಾಚಾರ ಎಸಗಿದ್ದಾನೆ.
ಆರೋಪಿಯೂ ಮತ್ತೆ ಕರೆದಾಗ ಬಾಲಕಿ ನಿರಾಕರಿಸಿದಾಗ ವಿಡಿಯೋವನ್ನು ಅಪ್ರಾಪ್ತ ತಾಯಿಗೆ ಕಳುಹಿಸಿದ್ದ ವಿಡಿಯೋ ಕಳುಹಿಸಿ ಹಣಕ್ಕೆ ಆರೋಪಿ ಬೇಡಿಕೆ ಇಟ್ಟಿದ್ದ ಈ ಬಗ್ಗೆ ಅಪ್ರಾಪ್ತ ಬಾಲಕಿಯಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.