ಉಡುಪಿ:ಜನವರಿ 25:ಮಹಾತ್ಮ ಗಾಂಧಿ ಹುತಾತ್ಮರಾದ ದಿನವಾದ ಜನವರಿ 30 ರಂದು ರಾಜ್ಯಾದ್ಯಂತ ಸೌಹಾರ್ದ ಕರ್ನಾಟಕ ಸಂಘಟನೆಯು “ಸೌಹಾರ್ದ ಮಾನವ ಸರಪಳಿ” ಆಯೋಜಿಸಿದ್ದು ಅದರ ಅಂಗವಾಗಿ ಉಡುಪಿಯ ಕ್ಲಾಕ್ ಟವರ್ ಬಳಿ ಮಾನವ ಸರಪಳಿ ಆಯೋಜಿಸಲಾಗಿದೆ.
ಈ ಹಿನ್ನಲೆಯಲ್ಲಿ ಉಡುಪಿಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ವತಿಯಿಂದ ಮಾನವ ಸರಪಳಿಗೆ ಸಂಬಂಧಿಸಿದ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮವು ಜನವರಿ 30 ರ ಸಂಜೆ 4.30 ಕ್ಕೆ ಸರಿಯಾಗಿ ಕ್ಲಾಕ್ ಟವರ್ ಬಳಿ ನಡೆಯಲಿರುವುದೆಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ಹೊಣೆಗಾರರಾದ ಬಾಲಕೃಷ್ಣ ಶೆಟ್ಟಿ, ಸುಂದರ್ ಮಾಸ್ತರ್, ಪ್ರೊ.ಫಣಿರಾಜ್, ಡಾ.ಜೆರಾಲ್ಡ್ ಪಿಂಟೋ,ರೊನಾಲ್ಡ್, ಸಂಜೀವ್ ಬಳ್ಕೂರು,ಶಶಿಧರ್,ಕವಿರಾಜ್,ಮೋಹನ್ ಮತ್ತು ಸಂತೋಷ್ ಕರ್ವೆಲೋ ಉಪಸ್ಥಿತರಿದ್ದರು.