ಉಡುಪಿ:ಜನವರಿ 24: ಸಿಐಟಿಯು ನೇತ್ರತ್ವದಲ್ಲಿ ದೇಶಾದ್ಯಂತ 3 ದಿನಗಳ ಕಾಲ ಸಂಸದರ ಕಛೇರಿ ಚಲೋ ಹೋರಾಟ ಇಂದು 2ನೇ ದಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯುತಿದೆ. ಇಂದಿನ ಹೋರಾಟದಲ್ಲಿ ಹಂಚು ಕಾರ್ಮಿಕರು,ಬೀಡಿ ಕಾರ್ಮಿಕರು, ಜನರಲ್ ವರ್ಕಸ್ ಕಾರ್ಮಿಕರು, ಕೆಲಸಗಾರ ಸಂಘದ ಕಾರ್ಮಿಕರು ಭಾಗವಹಿಸಿದ್ದರು.
ಸಂಸದರ ಅಪ್ತ ಕಾರ್ಯದರ್ಶಿ ವರಿಗೆ ಮನವಿ ನೀಡಲಾಯಿತು ಪ್ರತಿಭಟನೆಯಲ್ಲಿ ಹಂಚು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ,ಮುಖಂಡರಾದ ಜಿ.ಡಿ.ಪಂಜು, ಬೀಡಿ ಸಂಘದ ಮುಖಂಡರಾದ ಉಮೇಶ್ ಕುಂದರ್,ನಳಿನಿ,ಬಲ್ಕಿಸ್,ಜನರಲ್ ವರ್ಕ್ಸ್ ಯೂನಿಯನ್ ಅಧ್ಯಕ್ಷ ರಾದ ಶಶಿಧರ ಗೊಲ್ಲ,ಕಾರ್ಯದರ್ಶಿ ರಮೇಶ್ ಶೇರಿಗಾರ, ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ ಕೆ.ಶಂಕರ್, ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಕಾರ್ಕಳ ತಾಲೂಕು ಬೀಡಿ ಸಂಘದ ಕಾರ್ಯದರ್ಶಿ ಕವಿರಾಜ್. ಎಸ್ ಕುಂದಾಪುರದ ಕೆಲಸಗಾರರ ಸಂಘದ ಮುಖಂಡರಾದ ಗಿರಿಜಾ ಅಚಾರ್ತಿ,ಗಿರಿಜಾ ಶೆಟ್ಟಿ ಮುಖಂಡರಾದ ಮೋಹನ್ ಉಪಸ್ಥಿತರಿದ್ದರು.