ಉಡುಪಿ : ಜನವರಿ 23: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಯೋಧ್ಯೆಯ ರಾಮ ಪ್ರತಿಷ್ಠಾಪನೆಯ ಸಂಭ್ರಮಾಚರಣೆಯ ಪ್ರಯುಕ್ತ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರಧಾನ ಸಂಕಲ್ಪದಲ್ಲಿ ಸರ್ವರ ಹಿತಕ್ಕಾಗಿ ಶ್ರೀ ರಾಮನಾಮ ತಾರಕ ಮಂತ್ರ ಯಾಗ ಹಾಗೂ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿ ಅಪಾರ ಜನ ಮೆಚ್ಚುಗೆಗಳಿಸಿತು..
ಸಂಜೆ ನೆರವೇರಿದ ಧಾರ್ಮಿಕ ಸಭೆಯಲ್ಲಿ ಶ್ರೀ ಭೀಮಸೇತು ಮುನಿ ವೃoದ ಮಹಾ ಸಂಸ್ಥಾನದ ಯತಿವರೇಣ್ಯರಾದ ಭರಮಪೂಜ್ಯ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.. ಉಡುಪಿ ಶಾಸಕರಾದ ಶ್ರೀಯುತ ಯಶ್ ಪಾಲ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದರು..
ಉಡುಪಿಯ ಶ್ರೀಮತಿ ಚಂದ್ರಕಲಾ ಅಜಿತ್ ಅವರು ರಾಮರಕ್ಷಾ ಸ್ತೋತ್ರವನ್ನು ಪಠಿಸಿ ಅದರ ಮಹತ್ವವನ್ನು ತಿಳಿಸಿದರು.. ಕೊರಂಗ್ರಪಾಡಿಯ ನಿವೃತ್ತ ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ಶರ್ಮ ಅವರು ರಾಮನಾಮ ಸಂಕೀರ್ತನೆಯನ್ನು ಪ್ರಸ್ತುತಪಡಿಸಿದರು..
ಕೆಮ್ಮಣ್ಣು ಸಿಸ್ಟರ್ ನ ಕುಮಾರಿ ಸುಮೆದಾ ರಾಮದುನ್ ಕಾರ್ಯಕ್ರಮ ನೆರವೇರಿಸಿದರು.
ಹೆಸರಾಂತ ಕಲಾವಿದರಾದ ಶ್ರೀ ವಿನಯ್ ವಾರಣಾಸಿ ಅವರು *ಅಲ್ಲಿ ನೋಡು ರಾಮ* ವಿಶೇಷ ಪ್ರವಚನ ಮಾಲಿಕೆ ಅದ್ಭುತವಾಗಿ ನೆರವೇರಿಸಿ ಕೊಟ್ಟರು..
ಹಾಡುಗಾರಿಕೆಯಲ್ಲಿ ಕುಮಾರಿ ಸಮನ್ವಿ ಹಾಗೂ ಅರ್ಚನಾ, ತಬಲಾದಲ್ಲಿ ಮಾಧವ ಆಚಾರ್ಯ ಉಡುಪಿ ವಯಲಿನಲ್ಲಿ ಶೃತಿ ಸಿ ವಿ ಮೈಸೂರ್, ಕಬಲಾದಲ್ಲಿ ನಿಕ್ಷಿತ್ ಪುತ್ತೂರು ಸಹಕರಿಸಿದರು.. ನಂತರ ಕಲಾಸ್ನೇಹಿ ಹಾಗು ನರ್ತನ ಯೋಗ ನೃತ್ಯ ಸಂಸ್ಥೆ ಬೆಂಗಳೂರು ಇದರ ಯೋಗೇಶ್ ಕುಮಾರ್ ಮತ್ತು ಸ್ನೇಹ ನಾರಾಯಣ್ ಅವರಿಂದ *ರಾಮಕಥಾ ಸುಧಾ* ನೃತ್ಯ ರೂಪಕ ನೆರವೇರಿತು…ಕಲಾವಿದರೆಲ್ಲರಿಗೂ ಕೂಡ ಕ್ಷೇತ್ರದ ವತಿಯಿಂದ ಗೌರವ ಸಮರ್ಪಣೆ ಮಾಡಿ ಅನುಗ್ರಹ ಪ್ರಸಾದ ನೀಡಲಾಯಿತು…
ದೀಪದ ಬೆಳಕಿನ ಅಡಿಯಲ್ಲಿ ನೆರವೇರಿದ ಅಪಾರ ಭಕ್ತ ಸಮೂಹ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.. ಸಂಭ್ರಮ ಉಲ್ಲಾಸದೊಂದಿಗೆ ನೆರವೇರಿದ ಈ ಕಾರ್ಯಕ್ರಮದಲ್ಲಿ ದುರ್ಗಾದಿ ಶಕ್ತಿಯ ಅನ್ನ ಪ್ರಸಾದ ಮೃಷ್ಟಾನ್ನ ರೀತಿಯಲ್ಲಿ ಭಕ್ತರಿಗೆ ವಿತರಿಸಲಾಯಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ