ಮೂಡುಬಿದ್ರೆ: ಜನವರಿ ೨೩:ರಾಜ್ಯ ಮಟ್ಟದ ಕಬ್ ಬುಲ್ ಬುಲ್ ಉತ್ಸವ-2024 ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ. ಜಿಲ್ಲೆ ಸಾರಥ್ಯದಲ್ಲಿ ಈ ಬಾರಿ ಮೂಡುಬಿದಿರೆಯ ಕನ್ನಡ ಭವನದಲ್ಲಿ ಆಯೋಜನೆಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗಾಗಿ ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜೊತೆಗೆ ಮೂರನೆ ದಿನವಾದ ಇಂದು (23 ಜನವರಿ 2024) ರಾಜ್ಯದ ಪ್ರಸಿದ್ಧ ಮಕ್ಕಳ ನಾಟಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳು ಅಭಿನಯಿಸುವ ವೈದೇಹಿ ವಿರಚಿತ ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ “ನಾಯಿಮರಿ ನಾಟಕ” ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.