ಉಡುಪಿ : ಜನವರಿ 23:ದ್ರಶ್ಯ ನ್ಯೂಸ್: ಅಯೋಧ್ಯೆ ಶ್ರೀರಾಮನಪ್ರಾಣಪ್ರತಿಷ್ಠೆಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಿದಿಯೂರು ಹೊಟೇಲ್‌ನ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ, ಬ್ರಹ್ಮರಥ, ಮಹಾಪೂಜಾ ರಥ, ಸ್ವರ್ಣರಥ, ನವರತ್ನರಥ ಹಾಗೂ ರಜತರಥ ಎಳೆಯುವ ಮೂಲಕ ಪಂಚ ರಥೋತ್ಸವ ಕಿದಿಯೂರು ಹೊಟೇಲ್‌ಪ್ರಾಯೋಜಕತ್ವದಲ್ಲಿ ಸೋಮವಾರ ನಡೆಯಿತು
ಈ ಸಂಧರ್ಭ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ನಡೆಯಿತು.ಸಾವಿರಾರು ಭಕ್ತರು ಪಂಚ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು