ಉಡುಪಿ : ಜನವರಿ 22: ದ್ರಶ್ಯ ನ್ಯೂಸ್ :ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಕುಲಶೇಖರ, ಮಂಗಳೂರು ಇದರ “ಉಡುಪಿ ಉಪ್ಪೂರು ಡೈರಿ ಆಡಳಿತ ಕಛೇರಿ ಶಂಕು ಸ್ಥಾಪನೆ ಹಾಗೂ ನೂತನ ಉಪಹಾರ ಗೃಹದ ಉದ್ಘಾಟನಾ ಸಮಾರಂಭ ದಿನಾಂಕ 21-01-2024 ರಂದು ನಡೆಯಿತು
ಉಡುಪಿ ಜಿಲ್ಲೆ ಉಪ್ಪೂರಿನಲ್ಲಿ ರುವ ಉಡುಪಿ ಡೇರಿ ಆವರಣದಲ್ಲಿ ಸುಮಾರು 4.10 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಿರುವ ಹೊಸ ಆಡಳಿತ ಕಚೇರಿ ಕಟ್ಟಡಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಅದೇ ರೀತಿ ಸದರಿ ಹಾಲು ಸಂಸ್ಕರಣಾ ಘಟಕದಲ್ಲಿ ಪ್ರತಿದಿನ ಕಾರ್ಯ ನಿರ್ವಹಿಸುತ್ತಿರುವ ಸುಮಾರು 150ರಿಂದ 200 ಮಂದಿ ನೌಕರರ ಊಟ ಉಪಹಾರಕ್ಕೆ 1.20 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಉಪಹಾರ ಗೃಹವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಮಾಜಿ ಶಾಸಕ ಕೆ.ರಘುಪತಿ ಭಟ್ ನಾಮಫಲಕ ಅನಾವರಣಗೊಳಿಸಿ ಶುಭಹಾರೈಸಿದರು.
ಉಡುಪಿ ಘಟಕದಲ್ಲಿ ಐಸ್‌ಕ್ರೀಮ್ ಘಟಕವನ್ನು ಪ್ರಾರಂಭಿಸುವ ಹಾಗೂ ಹೆಚ್ಚು ಹಾಲನ್ನು ಪಡೆದು ಸಂಸ್ಕರಿಸಿ ಪ್ರತಿದಿನ ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಒಕ್ಕೂಟ ಹಾಕಿಕೊಂಡಿದೆ ಎಂದು ಎಂ.ಡಿ. ವಿವೇಕ್ ತಿಳಿಸಿದರು.
ಉಪ್ಪೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕಾರ್ಯಕಾರಿ ಮಂಡಳಿ ಸದಸ್ಯರಾದ ರವಿ ರಾಜ ಹೆಗ್ಡೆ, ಕಾಪು ದಿವಾಕರ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ನರಸಿಂಹ ಕಾಮತ್ ಸಾಣೂರು, ಬಿ.ಸುಧಾಕರ ರೈ, ಸುಧಾ ಕರ ಶೆಟ್ಟಿ, ಸವಿತಾ ಎನ್.ಶೆಟ್ಟಿ, ಸ್ಮಿತಾ ಆರ್.ಶೆಟ್ಟಿ, ಬಿ.ಸದಾಶಿವ ಶೆಟ್ಟಿ,ಕಮಲಾಕ್ಷ ಹೆಬ್ಬಾರ್ ಅಲ್ಲದೇ ಉಪನಿರ್ದೇಶಕ ಡಾ. ಅರುಣಕುಮಾರ್ ಶೆಟ್ಟಿ ಎನ್. ಉಪಸ್ಥಿತರಿದ್ದರು.