ಕಾಪು: ಜನವರಿ 22: ಆರ್ಟಿಸ್ಟ್ ಫೋರಂನ ಕಲಾವಿದರಾದ ಶ್ರೀನಾಥ್ ಮಣಿಪಾಲ, ರವಿ ಹೀರಬೆಟ್ಟು ಪುರಂದರ್ ಮಲ್ಪೆ ಅವರು ಆಭರಣ ಜ್ಯುವೆಲ್ಲರ್ ಸಹಯೋಗದೊಂದಿಗೆ ಕಾಪು ಕಡಲ ಕಿನಾರೆಯಲ್ಲಿ ‘ಅಳಿಲಿನ ಮರಳು ಶಿಲ್ಪ’ ರಚಿಸಿ ರಾಮಾಯಣದಲ್ಲಿನ ಅಳಿಲಿನ ಸೇವೆಯನ್ನು ನೆನಪಿಸಿದರು.
ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮ ದೇವರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ರಚಿಸಿದ ಅಳಿಲು ಕಾಪು ಕಡಲ ಕಿನಾರೆಗೆ ಬಂದ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.