ಉಡುಪಿ : ಜನವರಿ 19:ಅಯೋಧ್ಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಮಂದಿರ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪ್ರಭು ಶ್ರೀಕೋದಂಡರಾಮನ ಚಿತ್ರವನ್ನು ಅಶ್ವಥ ಎಲೆಯಲ್ಲಿ ಗಣೇಶ್ ರಾಜ್ ಸರಳೇಬೆಟ್ಟುರವರು ಶ್ರೀಕೋಂಡ ರಾಮನ ರೇಖಾಚಿತ್ರವನ್ನು ಅಶ್ವತಎಲೆಯಮೇಲೆರಚಿಸಿ ಗಮನಸೆಳೆದಿದ್ದಾರೆ. ಗಜಗಾತ್ರದ ಅಶ್ವಥ ಎಲೆಯನ್ನು ಬಾರ್ಕೂರಿನ ಶ್ರೀಕುಲಮಾಸ್ತ್ರಿಅಮ್ಮನ ದೇವಸ್ಥಾನದ ಆವರಣದಲ್ಲಿರುವ ಅಶ್ವಥಮರದ ಎಲೆಯನ್ನೇ ಬಳಸಿಕೊಂಡು ರಚಿಸಿದ್ದಾರೆ,
ಜನವರಿ 22ರಂದು ಸೋಮವಾರ. ಪರ್ಕಳದಮಾರ್ಕೆಟ್ ರೋಡ್ ನಲ್ಲಿರುವ ಸುಮಂಗಲ ಜನರಲ್ ಸ್ಟೋರ್ ನವರು ಸ್ಥಳೀಯವಾಗಿ ಆಯೋಜಿಸಲಾದ ಅಯೋಧ್ಯೆಯಲ್ಲಿ ರಾಮಮಂದಿರದ ವಿಗ್ರಹಪ್ರತಿಷ್ಠಾಪನಾ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಈ ಚಿತ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು. ಎಂದುಸರಳೇಬೆಟ್ಟು ತಿಳಿಸಿದ್ದಾರೆ.