ಉಡುಪಿ : ಜನವರಿ 16: ದ್ರಶ್ಯ ನ್ಯೂಸ್ : ಉಡುಪಿಯಲ್ಲಿ ನೇರವೇರಲಿರುವ ವಿಶ್ವ ಗೀತಾ ಪರ್ಯಾಯದಲ್ಲಿ ಪಾಲ್ಗೊಳ್ಳಲು ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರ ವಿಶೇಷ ಆಹ್ವಾನಿತ ಅತಿಥಿಯಾಗಿ ಜಪಾನ್ ದೇಶದಿಂದ ರೇವ್ ಕೋಶೋ ನಿವಾನೋ ಮತ್ತು ಅವರ ಜೊತೆಯಲ್ಲಿ ಆರು ಮಂದಿಯ ನಿಯೋಗವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ದಿನ ಸ್ವಾಗತಿಸಲಾಯಿತು.
ವಿಶ್ವ ಗೀತಾ ಪರ್ಯಾಯದ ಸ್ವಾಗತ ಸಮಿತಿಯ ಕೋಶಾಧಿಕಾರಿ ಶ್ರೀ ರಂಜನ್ ಕಲ್ಕೂರ ಮತ್ತು ಶ್ರೀಮತಿ ಲಕ್ಷ್ಮೀ ರಂಜನ್, ಶ್ರೀ ಪುತ್ತಿಗೆ ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯ ಚಟುವಟಿಕೆಗಳ ಸಂಯೋಜಕ ಡಾ. ಎ. ಕೇಶವರಾಜ್ ಮತ್ತು ಪರ್ಯಾಯ ಮಹೋತ್ಸವದ ಕಾರ್ಯಕರ್ತ, ಶ್ರೀ ಎ. ಮುರಳೀಧರ್ ಅವರು ಜಪಾನಿನ ಗಣ್ಯ ಅತಿಥಿಗಳನ್ನು ಹಾರಾರ್ಪಣೆಯ ಮೂಲಕ ಹೃತ್ಪೂರ್ವಕವಾಗಿ ಸ್ವಾಗತಿಸಿದರು.