ನವದೆಹಲಿ : ಜನವರಿ 16: ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 14.5 ಕೋಟಿ ರೂಪಾಯಿಗೆ ಭೂಮಿ ಖರೀಸಿದ್ದಾರೆ. ಈ ಜಾಗ ಸುಮಾರು 10 ಸಾವಿರ ಅಡಿ ಚದರ ಅಡಿ ಹೊಂದಿದೆ. ಈ ಜಾಗ ಖರೀದಿಸಲಾಗಿದ್ದು, ಜಾಗತಿಕ ಆಧ್ಯಾತ್ಮದ ರಾಜಧಾನಿ ಅಯೋಧ್ಯೆಯಲ್ಲೇ ನಾನು ಒಂದು ಮನೆ ಕಟ್ಟುವೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಖರೀದಿಸಿರುವ ಈ ಜಾಗದಿಂದ ಕೇವಲ 15 ನಿಮಿಷದಲ್ಲಿ ಅಯೋಧ್ಯೆ ರಾಮಮಂದಿರವನ್ನು ತಲುಪಬಹುದಾಗಿದೆ. ಅಯೋಧ್ಯೆಯ ಏರ್‌ಪೋರ್ಟ್‌ನಿಂದ ಈ ಜಾಗಕ್ಕೆ ಅರ್ಧ ಗಂಟೆಯ ಪ್ರಯಾಣದ ಅವಧಿ ಇದೆ. ಅಯೋಧ್ಯೆಯ ಈ ಜಾಗದಲ್ಲೇ ಮನೆ ನಿರ್ಮಿಸಲು ಅಮಿತಾಬ್ ಬಚ್ಚನ್ ನಿರ್ಧಾರ ಮಾಡಿದ್ದಾರೆ.
ಅಯೋಧ್ಯೆಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಅಯೋಧ್ಯೆಯಲ್ಲಿ ಸಂಪ್ರದಾಯ, ಆಧುನೀಕತೆ ಎರಡರ ಸಮ್ಮಿಲನವಾಗಿದೆ. ನನ್ನ ಹೃದಯಸ್ಪರ್ಶಿ ಪ್ರಯಾಣವು ಅಯೋಧ್ಯೆಯ ಆತ್ಮದೊಂದಿಗೆ ಆರಂಭವಾಗಿದೆ. ಹೀಗಾಗಿ ಜಾಗತಿಕ ಆಧ್ಯಾತ್ಮ ರಾಜಧಾನಿಯಲ್ಲಿ ನನ್ನ ಮನೆ ನಿರ್ಮಾಣವನ್ನು ಎದುರು ನೋಡುತ್ತಿದ್ದೇನೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಖರೀದಿಸಿರುವ ಭೂಮಿಯು ಅಯೋಧ್ಯೆ ಸರಯೂ ದಂಡೆಯಲ್ಲಿದೆ. ದಿ ಹೌಸ್ ಆಫ್ ಅಭಿನಂದನ್ ಲೋಧಾರಿಂದ ಜಾಗ ಖರೀದಿಸಿದ ಮೊದಲ ವ್ಯಕ್ತಿ ಅಮಿತಾಬ್ ಬಚ್ಚನ್ ಅವರಾಗಿದ್ದಾರೆ. ಅಯೋಧ್ಯೆಯ ಆರ್ಥಿಕ ಸಾಮರ್ಥ್ಯ, ಆಧ್ಯಾತ್ಮದ ಪರಂಪರೆಯ ಮೆಚ್ಚುಗೆಯನ್ನು ಈ ಜಾಗ ಖರೀದಿ ಸೂಚಿಸುತ್ತೆ ಎಂದು ಅಭಿನಂದನ್ ಲೋಧಾ ಹೇಳಿದ್ದಾರೆಯಾಗಿದೆ .