ಉಡುಪಿ: ಜನವರಿ 16: ಭಾವೀ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಕಳದ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು.
ಶ್ರೀಪಾದರನ್ನು ಸಂಪ್ರದಾಯಬದ್ಧವಾಗಿ ಛತ್ರ ಚಾಮರಾದಿಗಳಿಂದ ಸ್ವಾಗತಿಸಲಾಯಿತು. ಶ್ರೀಪಾದರು ತಮ್ಮ ಚತುರ್ಥ ಪಯಾìಯದ ಪ್ರಧಾನ ಯೋಜನೆಯಾದ ಕೋಟಿ ಗೀತಾ ಲೇಖನ ಯಜದ ಬಗ್ಗೆ ಮಾತನಾಡಿ ಭಗವದ್ಗೀತೆ ಬರೆಯುವ ಮೂಲಕ ತಮ್ಮ ಬೌದ್ಧಿಕ ಸ್ತರವನ್ನು ವಿಸ್ತಾರ ಮಾಡಿಕೊಳ್ಳಲು ಉತ್ತಮ ಅವಕಾಶ ಎಂದರು.
ಭಕ್ತರಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿ ವಿಶ್ವಗೀತಾ ಪರ್ಯಾಯೋತ್ಸವಕ್ಕೆ ಆಹ್ವಾನಿಸಿದರು.