ಉಡುಪಿ : ಜನವರಿ 16:ಶ್ರೀ ಕೃಷ್ಣಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ ಸತತ 32 ವರ್ಷಗಳಿ೦ದ ಉಡುಪಿಯ ಹೃದಯಭಾಗ ಕಿನ್ನಿಮುಲ್ಕಿ ಜ೦ಕ್ಷನ್ ಬಳಿ ಉಡುಪಿ ನಾಡಹಬ್ಬ ಪರ್ಯಾಯಮಹೋತ್ಸವದ ಅ೦ಗವಾಗಿ ಉಡುಪಿಯ ಜನತೆಗೆ ಸಾ೦ಸ್ಕೃತಿಕ ರಸದೌತಣ ನೀಡುತ್ತ ಬ೦ದಿರುತ್ತದೆ ಈ ಬಾರಿಯೂ ದಿನಾ೦ಕ 17-01-2024 ರ ಬುಧವಾರ ಸ೦ಜೆ 6.00 ಗ೦ಟೆಗೆ ಕಿನ್ನಿಮುಲ್ಕಿ ಜ೦ಕ್ಷನ್ ಬಳಿ ಅದ್ದೂರಿಯ ವೈವಿಧ್ಯಮ ಸಾ೦ಸ್ಕೃತಿಕ ಕಲಾ ಸ೦ಜೆ ನಡೆಯಲಿರುವುದು
ಕಿನ್ನಿಮೂಲ್ಕಿ ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ ಜ. 17ರಂದು ಸಂಜೆ 7ಕ್ಕೆ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ರಸಮಂಜರಿ, ನೃತ್ಯ ಆಯೋಜಿಸಲಾಗಿದೆ.
ಸಭಾ ಕಾರ್ಯಕ್ರಮದ ಉದ್ಘಾಟನೆ ಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್ ನೆರವೇರಿಸಲಿದ್ದಾರೆ. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಉಪಸ್ಥಿತರಿರುವರು.
ಆ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಸ್ಪೋಟ್ಸ್ ಕಿಟ್,ರಿಕ್ಷಾ ಚಾಲಕರಿಗೆ ಸಮವಸ್ತ್ರ,ಅ೦ಗನವಾಡಿ ಮಕ್ಕಳಿಗೆ ಆಟೋಟ ಸಾಮಗ್ರಿ ಶಾಲೆಗಳಿಗೆ ಫ್ಯಾನ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಶ್ರೀ ಕೃಷ್ಣಗ್ರೂಫ್ ಆಫ್ ಡ್ಯಾನ್ಸ್ನ ನಿರ್ದೇಶಕ ಕೆ ಕೃಷ್ಣಮೂರ್ತಿ ಆಚಾರ್ಯ ಇವರು ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ 9845199597/ 8073130875 ಸಂಖ್ಯೆ ಗೆ ಬೆಳ್ಳಿಗೆ 9.30 ರಿ೦ದ 5.00 ರ ಒಳಗೆ ಸಂಪರ್ಕಿಸಬಹುದಾಗಿದೆ