ಉಡುಪಿ : ಜನವರಿ15 :ದ್ರಶ್ಯ ನ್ಯೂಸ್: ಧರ್ಮಸ್ಥಳದಿಂದ ಅಯೋಧ್ಯೆಯ ರಾಮಲಲ್ಲಾನ ಪೂಜೆಗೆ ಬೆಳ್ಳಿ ಪರಿಕರಗಳನ್ನು ನೀಡಲಾಗಿದೆ. ಹೌದು ಹರ್ಷೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಿಂದ ಬಂದ ಬೆಳ್ಳಿಯ ಪೂಜಾ ಪರಿಕರಗಳನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು.
ಉಡುಪಿ ಎಸ್ಡಿಎಮ್ ಆಯುರ್ವೇದ ಕಾಲೇಜಿನ ಕಾರ್ಯದರ್ಶಿ ಹರ್ಷೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಿಂದ ಬಂದ ಬೆಳ್ಳಿಯ ಪೂಜಾ ಪರಿಕರಗಳನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆ ರೂಪದಲ್ಲಿ ಪೂಜಾ ಪರಿಕರಗಳನ್ನು ನೀಡಲಾಗಿದೆ. ಬಾಲರಾಮನ ಅಭಿಷೇಕ, ಪೂಜೆಗೆ ಬಳಕೆಗೆ ಬೇಕಾದ ಬೆಳ್ಳಿಯ ಪರಿಕರಗಳು ಇರುವ ಬಾಕ್ಸ್ ಅನ್ನು ನೀಡಿದರು.