ಬೆಂಗಳೂರು : ದ್ರಶ್ಯ ನ್ಯೂಸ್ :ಮಟ್ರಿಕ್ ನಂತರದ ವಿದ್ಯಾಭ್ಯಾಸಕ್ಕೆ ಸರಕಾರ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ಅರ್ಹ ವಿದ್ಯಾರ್ಥಿ ಈ ಕೂಡಲೇ ಅರ್ಜಿ ಸಲ್ಲಿಸಿ ವಾರ್ಷಿಕವಾಗಿ ಸಿಗುವ ಸಹಾಯಧನವನ್ನು ಸರಕಾರದಿಂದ ಪಡೆದುಕೊಳ್ಳಬಹುದು.
ಸಮಾಜ ಕಲ್ಯಾಣ ಇಲಾಖೆ 2023-24 ನೇ ಸಾಲಿನ ಮೆಟ್ರಿಕ್ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅನೂಲವಾಗಲಿ ಎಂದು ಬೆಂಗಳೂರಿನ ದಕ್ಷಿಣ ತಾಲೂಕು ವ್ಯಾಪ್ತಿಯಲ್ಲಿ ಅಧ್ಯಯನ ಮಾಡುತ್ತಿರುವ ಶಾಲಾ ಕಾಲೇಜುಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಿದೆ.
ವಿದ್ಯಾರ್ಥಿಗಳು https://ssp.postmatric.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಥವಾ ಆಫ್‌ಲೈನ್ ಈ ಕೆಳಕಂಡ ವಿಳಾಸಕ್ಕೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು.
ವಿಳಾಸ: ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ತಾಲೂಕು, ಎಸ್ ಕರಿಯಪ್ಪ ಮುಖ್ಯ ರಸ್ತೆ, ಬನಶಂಕರಿ, ಬೆಂಗಳೂರು-560070. ದೂರವಾಣಿ ಸಂಖ್ಯೆ;080-26711096