ಕಾರ್ಕಳ :ಜನವರಿ 14: ದ್ರಶ್ಯ ನ್ಯೂಸ್ : ಇಂದು ದಿನಾಂಕ 14 -01- 2024 ಭಾನುವಾರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಸಂತ ಸೇಬಶ್ಚಿಯನರಾ ಹಬ್ಬವನ್ನು ಆಚರಿಸಲಾಯಿತು. ದಿವ್ಯ ಜ್ಯೋತಿ ಸಂಚಾಲಕರಾದ ವಂದನೀಯ ಸಿರಿಲ್ ಲೋಬೊ ಪ್ರಧಾನ ಗುರುಗಳಾಗಿ. ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸೇಬಸ್ಟಿಯನ್ ನರ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ಆಶೀರ್ವಚನವನ್ನು ನೀಡಲಾಯಿತು.
ತದನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು. ಉದ್ಘಾಟಕರಾಗಿ ನಿಟ್ಟೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ನಿತಿನ್ ಸಾಲಿಯಾನ್, ಪಂಚಾಯತ್ ಸದಸ್ಯರಾದ ರಾಜೇಶ್ ಸ್ವಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ ಗುರು ವಂದನಿಯಾ ಆಲ್ಬನ್ ಡಿಸೋಜ, ಸಹಾಯಕ ಧರ್ಮ ಗುರುಗಳಾದ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಧರ್ಮ ಗುರುಗಳಾದ ರೋಮನ್ ಮಸ್ಕೇರೆನ್ಹಸ್ ದಿವ್ಯಜ್ಯೋತಿಯ ನಿರ್ದೇಶಕರಾದ ವ0ದನೆಯ ಸಿರಿಲ್ ಲೋಬೊ,ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಕಾರ್ಯದರ್ಶಿ ರೋನಾಲ್ಡ್ ನೋರೊನ್ಹ, 20 ಆಯೋಗದ ಸಂಚಾಲಕರಾದ ಶ್ರೀಮತಿ ಬೆನ್ನಡಿಕ್ಟ ನೋರೊನ್ಹ, ಇವರು ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು.
ತದನಂತರ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ನಿತಿನ್ ಸಾಲಿಯಾನ್ ಇವರು ಈ ಹಬ್ಬ ನಮ್ಮ ಊರಿನ ಜಾತ್ರೆಯಾಗಿದೆ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ತದನಂತರ ವಾOದನೆಯ ಲ್ಯಾರಿ ಪಿಂಟೊ ಇವರು ಪ್ರಾರ್ಥನೆಯ ಮೂಲಕ ಹಬ್ಬದ ಮೇಲೆ ಆಶೀರ್ವಚನವಿತಾರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಇವರು ಕಾರ್ಯಕ್ರಮ ನೆರವೇರಸಿದುರು.
ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ. ಧನ್ಯವಾದ ಸಮರ್ಪಿಸಿದರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.