ಮಣಿಪಾಲ: ಜನವರಿ : 02: ದ್ರಶ್ಯ ನ್ಯೂಸ್ : ಆ್ಯಂಬುಲೆನ್ಸ್ ವಾಹನವೊಂದು ಮೆಡಿಕಲ್ ಶಾಪ್ ಒಂದಕ್ಕೆ ನುಗ್ಗಿದ ಘಟನೆ ತಡರಾತ್ರಿ ಎರಡು ಗಂಟೆ ಸುಮಾರಿಗೆ ಉಡುಪಿಯ ಲಕ್ಷ್ಮೀಂದ್ರ ನಗರದಲ್ಲಿ ಅಪಘಾತ ಸಂಭವಿಸಿದೆ.
ಮಣಿಪಾಲ ಕಡೆಯಿಂದ ಬರುತ್ತಿದ್ದ ಆಂಬುಲೆನ್ಸ್, ಡಿವೈಡರ್ ನ ಗ್ಯಾಪ್ ನಲ್ಲಿ ಬಲಕ್ಕೆ ತಿರುಗಿ ಮೆಡಿಕಲ್ ಶಾಪ್ ಒಂದಕ್ಕೆ ನುಗ್ಗಿದೆ. ಅಂಬುಲೆಸ್ನ ಬ್ರೇಕ್ ಫೇಲ್ ಆಗಿರುವುದರಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ತಿಳಿದುಬಂದಿದೆ.
ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದಾನೆ. ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೆಲ್ ಹಾಗೂ ಜನೌಷಧಿ ಮೆಡಿಕಲ್ ಗೆ ಅಪಾರ ಹಾನಿಯಾಗಿದೆ.
ತಡರಾತ್ರಿ ಯಾವುದೇ ವಾಹನ ಸಂಚಾರ, ಜನ ಸಂಚಾರ ಇಲ್ಲದೆ ಇರುವುದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ.