ಕಾರ್ಕಳ:ಡಿಸೆಂಬರ್ 30:ಮಿಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿ ಟೇಬಲ್ ಟ್ರಸ್ಟ್ ಮಂಗಳೂರು ಇವರ ಸಹಯೋಗದೊಂದಿಗೆ ಜರಗುವ 20ನೇ ವರ್ಷದ ಲವಕುಶ ಜೋಡು ಕೆರೆ ಬಯಲು ಕಂಬಳ ಮಹೋತ್ಸವದ ಪೂರ್ವ ಸಿದ್ಧತೆಯ ಬಗ್ಗೆ ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು
ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷರಾದ ಹಾಗೂ ಶಾಸಕರಾದ ಸುನಿಲ್ ಕುಮಾರ್ ಜನವರಿ 6 ರಂದು 8:00ಗೆ ಕಂಬದ ಉದ್ಘಾಟನೆ ಗೊಳ್ಳುವುದು ಈಗಾಗಲೇ ಕಂಬಳಕ್ಕೆ ಬೇಕಾಗುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರುತ್ತೇವೆ. ಕರಾವಳಿಯಲ್ಲಿ ತನ್ನದೇ ಆದ ಇತಿಹಾಸವನ್ನು ಮಾಡಿರುವಂತಹ ರೈತ ಪಿ ಚಟುವಟಿಕೆ ಮುಗಿದ ನಂತರ ಸಾಮಾನ್ಯರಿಗೂ ಕೂಡ ವಿಶೇಷವಾದ ಆಕರ್ಷಕವಾದ ಕ್ರೀಡೆ ಕಂಬಳವಾಗಿರುತ್ತದೆ. ಸರಕಾರದಿಂದ ಸಾಕಷ್ಟು ಅನುದಾನ ಬಂದಿರುತ್ತದೆ. ಪ್ರತಿ ವರ್ಷ ವರ್ಷದಿಂದ ವರ್ಷಕ್ಕೆ ಜಟದ ಕೋಣಗಳ ಸಂಖ್ಯೆ ಜಾಸ್ತಿಯಾಗುತ್ತಾ ಬರುತ್ತಿದೆ. ಎಂದು ಹೇಳಿದರು.
ಸಾಯಂಕಾಲದ ಸಭಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದರು ಹಾಗೂ ಕೇಂದ್ರ ಸಚಿವೆರಾದ ಶೋಭಾ ಕರಂದ್ಲಾಜೆ, ಪ್ರತಿಪಕ್ಷದ ನಾಯಕರಾದ ಅಶೋಕ್ ಕುಮಾರ್, ಉಮನಾಥ ಕೋಟ್ಯಾನ್, ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್, ಮುಂತಾದವರು ಭಾಗವಹಿಸಲಿರುವರು ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಗುಣ ಪಾಲ ಕಡಂಬ, ಶ್ಯಾಮಶೆಟ್ಟಿ, ರವೀಂದ್ರ ಕುಮಾರ್, ಜೀವನದಾಸ್ ಅಂಡೈತಾಯ, ಅಂತೋನಿ ಡಿಸೋಜಾ, ಇನ್ನಿತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸಿತರಿದ್ದರು.