ಕಾರ್ಕಳ:ಡಿಸೆಂಬರ್ 26: ದ್ರಶ್ಯ ನ್ಯೂಸ್ :ಕಾರ್ಕಳದ ಇತಿಹಾಸ ಪ್ರಸಿದ್ಧ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಅಭಿವೃದ್ಧಿ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ವೀಕ್ಷಣೆ ನಡೆಸಿ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು
ಈ ಸಂದರ್ಭದಲ್ಲಿ ಸಮಿತಿಯ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿ ಶುಭ ಹಾರೈಸಿದರು
ಕಾರ್ಕಳ ದಾನಶಾಲಾ ಜೈನ ಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ಥಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ನ್ಯಾಯವಾದಿ ಎಂ ಕೆ ವಿಜಯಕುಮಾರ್, ಎಂ ಕೆ ಸುವ್ರತ್ ಕುಮಾರ್ , ಕಾರ್ಕಳದ ಆನೆಕೆರೆ ಚತುರ್ಮುಖ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ ಮುಡಾರು, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಜೈನ್ ಶಿರ್ಲಾಲು, ಜೊತೆ ಕಾರ್ಯದರ್ಶಿ ಸೂರಜ್ ಜೈನ್, ಸಂಪತ್ ಜೈನ್, ಉಪಾಧ್ಯಕ್ಷರಾದ ಮಹೇಂದ್ರವರ್ಮ ಜೈನ್, ವ್ರಷಭರಾಜ ಜೈನ್, ಜಗದೀಶ್ ಹೆಗ್ಡೆ, ಅಧಿರಾಜ್ ಅಜ್ರಿಯವರು ಉಪಸ್ಥಿತರಿದ್ದರು