ಉಡುಪಿ : ಡಿಸೆಂಬರ್ 26:ಇತ್ತೀಚೆಗೆ ಗೋವಾದಲ್ಲಿ ಜರಗಿದ ಏಷ್ಯಾದ ಬೃಹತ್ ಸಂಯಕ್ತ ಕಲಾ ಉತ್ಸವವಾಗಿರುವ ಸೆರೆನ್‌ಡಿಪಿಟಿ ಆರ್ಟ್ಸ್ ಫೆಸ್ಟಿವಲ್ – 8 ನೆಯ ಆವೃತ್ತಿಯಲ್ಲಿ ವಿದುಷಿ ಶ್ರೀಲಕ್ಷ್ಮೀ ಗೋವರ್ಧನನ್ ನಿರ್ದೇಶಿಸಿದ ‘ಬಾರ್ಡ್ಸ್ ಆಫ್ ಸೌತ್’ ಶೀರ್ಷಿಕೆಯ ಪ್ರದರ್ಶನದಲ್ಲಿ ಥಿಯೇಟರ್ ಯಕ್ಷ [ರಿ.] ಉಡುಪಿ ಇದರ ಸಂಯೋಜನೆಯಲ್ಲಿ ಯಕ್ಷಗಾನ ಕಲಾವಿದರಾದ ಶಶಿಕರಣ್ ಮತ್ತು ಸುನಿಲ್ ಭಾಸ್ಕರ್ ‘ಜಟಾಯು ಪತನ’ ಕಥನವನ್ನು ಪ್ರಸ್ತುತಿಪಡಿಸಿದರು.
ಚಿನ್ಮಯ ಕಲ್ಲಡ್ಕ , ಚೈತನ್ಯಕೃಷ್ಣ ಪದ್ಯಾಣ ಮತ್ತು ಕೌಶಲ್ ರಾವ್ [ಧ್ವನಿಮುದ್ರಿತ] ಹಿಮ್ಮೇಳದಲ್ಲಿ ಸಹಕರಿಸಿದ್ದರು.