ಉಡುಪಿ: ಡಿಸೆಂಬರ್ 22: ದ್ರಶ್ಯ ನ್ಯೂಸ್ : ಉಡುಪಿ ನಗರಸಭೆಯ ನಳ್ಳಿ ನೀರಿನ ಸಂಪರ್ಕ ಪಡೆದು ಕೊಂಡಿರುವ ಗ್ರಾಹಕರು ತಮ್ಮ ನೀರಿನ ಬಳಕೆ ಬಾಕಿ ಶುಲ್ಕವನ್ನು ಜನವರಿ 5ರ ಒಳಗೆ ಪಾವತಿಸುವಂತೆ ತಿಳಿಸಲಾಗಿದೆ .ಇಲ್ಲದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನಳ್ಳಿನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ