ಕಾರ
ಕಾರ್ಕಳ:ಡಿಸೆಂಬರ್ 15 :ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಭುವನೇಂದ್ರ ಕಾಲೇಜ್ ಬಳಿ ಇರುವ ದಾನೀಯ ಪಿರೇರಾ ಪಟ್ಲ ಹೌಸ್ ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸರ ತಂಡ ದಾಳಿ ಗುರುವಾರ ದಾಳಿ ನಡೆಸಿ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ
ಹಣಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಹಾಗೂ ಯುವತಿಯರನ್ನು ಬಳಸಿಕೊಂಡು ಅನೈತಿಕ ದಂಧೆ ವ್ಯವಹಾರ ನಡೆಸುತ್ತಿದ್ದ ಕಾರ್ಕಳದ ಗೋವರ್ಧನ, ಎಣ್ಣೆಹೊಳೆ ಶಿವಕೃಪಾ ನಿವಾಸಿ ಉಪೇಂದ್ರ ಯಾನೆ ಅವಿನಾಶ್ ನಾಯ್ಕ್, ಉಡುಪಿ ತಾಲೂಕಿನ ದೀಪಾ, ಅಶೋಕ್ ಕಾರ್ಕಳ ಹಾಗೂ ಕುಕ್ಕುಂದೂರು ಗ್ರಾಮದ ನಕ್ರೆ ಕಿನ್ನರಕಟ್ಟೆ ಪ್ರವೀಣ್ ಪೂಜಾರಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಈ ದಂಧೆಗೆ ಬಳಸಿಕೊಂಡಿದ್ದ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.