ಮಂಗಳೂರು : ಡಿಸೆಂಬರ್ 13: ದ್ರಶ್ಯ ನ್ಯೂಸ್ : ಸುವರ್ಣ ಸೌಧದಲ್ಲಿರುವ ಸಾವರ್ಕರ ಭಾವಚಿತ್ರ ತೆರವುಗೊಳಿಸುವ ವಿಚಾರವಾಗಿ ಮೃದು ಧೋರಣೆಯ ಹೇಳಿಕೆ ನೀಡಿದ್ದ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ವಿರುದ್ಧ ಅವಹೇಳನ ಮಾಡಿ ಫೇಸ್ಟುಕ್ ಪೋಸ್ಟ್ ಹಾಕಿರುವ ಎಸ್ಡಿಪಿಐ ಪಕ್ಷದ ಮುಖಂಡನನ್ನು ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ
ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ಬಂಧಿತ ಆರೋಪಿಯಾಗಿದ್ದು, ಸೈಬರ್ಡ್ರೈಂ ಪೊಲೀಸರು ಉರ್ವಾ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಸುವರ್ಣ ಸೌಧದಲ್ಲಿ ಸಾವರ್ಕ್ರಫೋಟೋತೆರವು ಮಾಡಬೇಕೆಂಬಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಸ್ಪೀಕರ್ಖಾದರ್ತನ್ನ ಅಭಿಪ್ರಾಯ ತಿಳಿಸಿದ್ದರು.ನನ್ನ ಕೆಲಸ ಜೋಡಿಸುವುದು,ಕಿತ್ತು ಬಿಸಾಕುವುದಲ್ಲ ಎಂದು ಹೇಳುವ ಮೂಲಕ ವಿವಾದ ತಣ್ಣಗಾಗಿಸಿದ್ದರು.
ಖಾದರ್ನೀಡಿದ್ದ ಈ ಹೇಳಿಕೆ ವಿರುದ್ಧ ಫೇಸ್ಟುಕ್ನಲ್ಲಿ ಎಸ್ ಡಿಪಿಐ ಮುಖಂಡ ರಿಯಾಜ್ ಕಡಂಬು ಕುಹಕ ಮಾಡಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಕಾಂಗ್ರೆಸ್ ಪ್ರಮುಖರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.