ಮಣಿಪಾಲ : ಡಿಸೆಂಬರ್ 11: ದ್ರಶ್ಯ ನ್ಯೂಸ್ :ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಯ ದ ಮಣಿಪಾಲ್ ಸೆಂಟರ್ ಫಾರ್ ಬಯೋಥೆರಾಪಿಟಿಕ್ಸ್ ರೀಸರ್ಚ್ [ಎಂಸಿಬಿಆರ್] ಮತ್ತು ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸಾಯನ್ಸಸ್ [ಎಂಸಿಒಪಿಎಸ್] ಗಳ ಸಂಯುಕ್ತ ಸಹಭಾಗಿತ್ವದಲ್ಲಿ ‘ಜೈವಿಕ ಅಣುಗಳ ಶುದ್ಧೀಕರಣ ಮತ್ತು ಗುಣಲಕ್ಷಣ ವೈಶಿಷ್ಟ್ಯಗಳಿಗೆ ತಾಂತ್ರಿಕ ಅಳವಡಿಕೆ [ಟೆಕ್ನಿಕಲ್ ಎಪ್ರಾಚಸ್ ಇನ್‌ವಾಲ್ವಡ್ ಇನ್ ದ ಪ್ಯೂರಿಫಿಕೇಶನ್ ಆ್ಯಂಡ್ ಕ್ಯಾರೆಕ್ಟರೈಸೇಶನ್ ಆಫ್ ಬಯೋಮಾಲಿಕ್ಯೂಲ್ಸ್].ಎಂಬ ವಿಷಯದ ಮೇಲೆ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಿತ್ತು.
ಈ ಮಹತ್ತ್ವದ ಕಾರ್ಯಾಗಾರವು ಡಿಎಸ್‌ಟಿಯ ಸ್ತುತಿ [ಎಸ್‌ಟಿಯುಟಿಐ] ಯೋಜನೆಯ ಆಶ್ರಯದಲ್ಲಿ ಮುಂಬೈಯ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ]ಐಸಿಟಿ] ಯ ಸಹಭಾಗಿತ್ವದಲ್ಲಿ ಮಾಹೆ ಕ್ಯಾಂಪಸ್‌ನಲ್ಲಿ ಡಿಸೆಂಬರ್ 4 ರಿಂದ 10 ರವರೆಗೆ ನಡೆಯಿತು. ಐಸಿಟಿಯ ಡಿಎಸ್‌ಟಿ-ಎಸ್‌ಟಿಯುಟಿಐ ಯೋಜನೆಯ ಸಂಯೋಜಕರಾದ ಡಾ. ರತ್ನೇಶ್ ಜೈನ್ ಈ ಕಾರ್ಯಾಗಾರವನ್ನು ಮಾಹೆಯಲ್ಲಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಡಿಸೆಂಬರ್ 4 ರಂದು ಡಾ. ಎಂಸಿಒಪಿಎಸ್ [ಎಂಕಾಪ್ಸ್] ನ ಪಿಜಿಆರ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಉದ್ಘಾಟನ ಸಮಾರಂಭದಲ್ಲಿ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್, ಎಜಿಲೆಂಟ್ ಟೆಕ್ನಾಲಜೀಸ್‌ನ ಡಾ. ವಾದಿರಾಜ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಎಂಸಿಬಿಆರ್‌ನ ಸಂಯೋಜಕ ಪ್ರೊ [ಡಾ.] ರವಿರಾಜ ಎನ್. ಎಸ್. ಎಲ್ಲರನ್ನು ಸ್ವಾಗತಿಸಿದರು.
ಜೈವಿಕಅಣು ಶುದ್ಧೀಕರಣ ಮತ್ತು ಗುಣಲಕ್ಷಣ ನಿರ್ಧಾರದ ತಂತ್ರಜ್ಞಾನದ ಮೇಲೆ ಈ ಮಹತ್ತ್ವದ ಕಾರ್ಯಾಗಾರದಲ್ಲಿ ಭಾರತದ ಅನೇಕ ಕಡೆಗಳಿಂದ ಆಗಮಿಸಿದ ಶಿಬಿರಾರ್ಥಿಗಳು ಏಳು ದಿನಗಳ ಕಾಲ ನೇರವಾಗಿ ಪಾಲ್ಗೊಂಡರು. ಮೋನೋಸೈನಲ್ ಆ್ಯಂಟಿಬಾಡಿಯ ಶುದ್ಧೀಕರಣವನ್ನು ವಿಭಿನ್ನ ತಂತ್ರಜ್ಞಾನವನ್ನು ಉಪಯೋಗಿಸಿ ಮಾಡುವ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ಈ ಶಿಬಿರದಲ್ಲಿ ನೀಡಲಾಯಿತಲ್ಲದೆ, ತಜ್ಞರಿಂದ ಉಪನ್ಯಾಸಗಳು ನಡೆದವು. ಎಜಿಲೆಂಟ್ ಟೆಕ್ನಾಲಜೀಸ್, ಥರ್ಮೋಪಿಶರ್ ಸಾಯಿಂಟಿಫಿಕ್, ಬಯೋಕಾನ್, ಕ್ವಿಯಾಜೆನ್, ಕೆಂಪ್‌ವೆಲ್ ಬಯೋಫಾರ್ಮಾದ ತಜ್ಞರು ತರಬೇತಿ ಕಲಾಪಗಳನ್ನು ನಡೆಸಿಕೊಟ್ಟರು.
ಡಿಸೆಂಬರ್ 10 ರಂದು ಜರಗಿದ ಸಮಾರೋಪ ಸಮಾರಂಭದಲ್ಲಿ ಡಾ. ಬಿ. ಎಸ್. ಸತೀಶ್ ರಾವ್ ಅತಿಥಿಗಳಾಗಿದ್ದು ಪ್ರೊ. [ಡಾ.] ರವಿರಾಜ್ ಎನ್. ಎಸ್. ಸ್ವಾಗತಿಸಿದರು. ಮುಖ್ಯ ಅತಿಥಿ ಡಾ. ಸಿ. ಮಲ್ಲಿಕಾರ್ಜುನ ರಾವ್ ಉಪನ್ಯಾಸವನ್ನು ನೀಡಿದರು. ಕಾರ್ಯಾಗಾರದ ಭಾಗಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದುಅವರಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಗಳನ್ನು ಪ್ರದಾನ ಮಾಡಲಾಯಿತು. ಈ ಕಾರ್ಯಾಗಾರವು ಜೈವಿಕ ಅಣು ಶುದ್ಧೀಕರಣ ಮತ್ತು ಗುಣಲಕ್ಷಣ ನಿರ್ಧಾರಕ್ಕೆ ಸಂಬಂಧಿಸಿ ಸಹಅಧ್ಯಯನ ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಒದಗಿಸಿತು.
ಕಾರ್ಯಕ್ರಮದ ಕೊನೆಗೆ ಕಾರ್ಯಾಗಾರದ ಆಯೋಜನ ಕಾರ್ಯದರ್ಶಿ ಡಾ. ಸೋವಿಕ್ ಡೇ ಅವರು ಧನ್ಯವಾದ ಸಮರ್ಪಿಸಿದರು.