ಬಂಟ್ವಾಳ:ಡಿಸೆಂಬರ್ 11:ನಗರದ ಬಜಾಲ್ ಪಕ್ಕಲಡ್ಕದ ಕ್ಲಿನಿಕ್‌ಗೆ ತಮ್ಮನ ಆರೈಕೆಗೆಂದು ಬಂದಿದ್ದ ಬಂಟ್ವಾಳದ ದಿನೇಶ್ ಗೌಡ (33) ನಾಪತ್ತೆಯಾಗಿದ್ದಾರೆ.
ಡಿ.7ರಂದು ಬೆಳಗ್ಗೆ ಕ್ಲಿನಿಕ್‌ಗೆ ಬಂದು ಚಾ ಕುಡಿಯಲೆಂದು ಹೊರಗೆ ಹೋದವರು ವಾಪಸ್ ಬಂದಿಲ್ಲ. ಗೋಧಿ ಮೈಬಣ್ಣ, ಸಪೂರ ಶರೀರ, ಕೋಲುಮುಖ, 5 ಅಡಿ ಎತ್ತರ ಹೊಂದಿದ್ದು ನೇರಳೆ ಬಣ್ಣದ ಶರ್ಟ್, ನೀಲಿ ಬಣ್ಣದ ಬರ್ಮುಡಾ ಧರಿಸಿದ್ದರು.
ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.