ಕಾರ್ಕಳ : ಡಿಸೆಂಬರ್ : 09:ದ್ರಶ್ಯ ನ್ಯೂಸ್ ಕರುಣಾಳು ಬಾ ಬೆಳಕು ಪ್ರತಿಷ್ಠಾನ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಕೇರ್ವಷೆ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ ಕಾರ್ಕಳದ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕೇರ್ವಷೆ ಶಾಲೆಯಲ್ಲಿ ಆಧಾರ್ ಕಾರ್ಡ್ ನೋಂದಾವಣಿ ಮತ್ತು ಜನಸಂಪರ್ಕ ಅಭಿಯಾನ ಕಾರ್ಯಕ್ರಮವು ನಡೆಯಿತು. ಅದೇ ಸಮಯದಲ್ಲಿ ಉಚಿತ ಕಣ್ಣಿನ ಪೊರೆ ಪರೀಕ್ಷೆ, ಹೃದಯ ರೋಗ, ಮೂಳೆ ಕೀಲು ನೋವು ಚಿಕಿತ್ಸ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಯಾಪ್ಟನ್. ರಮೇಶ್ ಕಾರ್ಣಿಕ ಅವರು ನೆರವೇರಿಸಿ ವಿದ್ಯೆ ನಮ್ಮೆಲ್ಲರ ಸಂಪನ್ಮೂಲ ಬಾಲ್ಯದಲ್ಲಿ ಅದನ್ನು ಚೆನ್ನಾಗಿ ಅಭ್ಯಾಸ ಮಾಡಿ ದೊಡ್ಡವರಾದ ಮೇಲೆ ನಾವೆಲ್ಲರೂ ಸಮಾಜಕ್ಕೆ ಮಾದರಿ ಆಗಬೇಕೆಂದು ಶುಭಾಶಯ ನೀಡಿದರು. ಕರುಣಾಳು ಬಾ ಬೆಳಕು ಪ್ರತಿಷ್ಠಾನ ಇದರ ಸ್ಥಾಪಕರಾಗಿರುವಂತಹ ಶ್ರೀಮತಿ ರಮಿತಾ ಶೈಲೇಂದ್ರ ಅವರು ಕಾರ್ಯಕ್ರಮದ ಪ್ರಸ್ತಾವನೆಯನ್ನು ನೀಡಿದರು.
ಕಾರ್ಯಕ್ರಮದ ಸ್ವಾಗತ ಶಾಲಾ ಮುಖ್ಯೋಪಾಧ್ಯಾರಾದ ಕೃಷ್ಣಾ ನಾಯಕ್ ಅವರು ನೆರವೇರಿಸಿದರು. ಧನ್ಯವಾದವನ್ನು ಸಂಜೀವಿನಿ ಒಕ್ಕೂಟದ ಭವ್ಯ ಅವರು ನೀಡಿದರು. ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಪಂಚಾಯಿತ್ ಅಧ್ಯಕ್ಷರಾಗಿರುವ ಸುನಿತಾ ಅವರು ವಹಿಸಿಕೊಂಡಿದ್ದರು ಹಾಗೆ ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷರಾಗಿರುವ ಸುನಿಲ್ ಶೆಟ್ಟಿ, ಭಾರತೀಯ ಅಂಚೆ ವಿಭಾಗದ ಪ್ರಕಾಶ್, ಡಾಕ್ಟರ್ ಐಶ್ವರ್ಯ ಮತ್ತು ಎಸ್. ಡಿ.ಎಂ ಅಧ್ಯಕ್ಷರಾಗಿರುವ ದಿನೇಶ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಆಗಿರುವ ಸುಹಾಸಿನಿ ಯವರು ನೆರವೇರಿಸಿದರು.