ಕುಂದಾಪುರ,ಡಿಸೆಂಬರ್ 07:ದ್ರಶ್ಯ ನ್ಯೂಸ್ :ಕುಂದೇಶ್ವರ ದೀಪೋತ್ಸವದ ಸಂದರ್ಭದಲ್ಲಿ ಪ್ರಸ್ತುತ ಪಡಿಸುವ 10ನೇ ವರ್ಷದ ಕಾರ್ಟೂನ್ ಹಬ್ಬಕ್ಕೆ ಶುಭಕೋರುವ ಮರಳ ಶಿಲ್ಪವನ್ನು ಕೋಟೇಶ್ವರದ ಹಳೆಅಳಿವೆ ಕಡಲ ತೀರದಲ್ಲಿ ಗುರುವಾರ ರಚಿಸಲಾಯಿತು.
ಈ ಕಲಾಕೃತಿಯಲ್ಲಿ ಕುಂದೇಶ್ವರ ದೇವರನ್ನು ಕೇಂದ್ರವಾಗಿಸಿ, ಜನರ ಮನೋಭಿಲಾಷೆಯ ವಿವಿಧ ಹಸನ್ಮುಖಗಳ ಭಾವನೆಯಗಳ ಮುಖಗಳೊಂದಿಗೆ, ‘ಕಾರ್ಟೂನ್ ಹಬ್ಬ’ಕ್ಕೂ ಸ್ವಾಗತ ಎಂಬ ಧ್ಯೇಯದೊಂದಿಗೆ 4 ಅಡಿ ಮತ್ತು 7.5 ಅಡಿ ಎತ್ತರ ಅಗಲಗಳುಳ್ಳ ಮರಳು ಕಲಾಕೃತಿಯನ್ನು ರಚಿಸಲಾಗಿದೆ.
ಶಿಲ್ಪ ಕಲಾಕೃತಿ:- ಕರಾವಳಿ ಭಾಗ ಕುಂದಾಪುರದ ಪ್ರಸಿದ್ಧ ಹಬ್ಬಗಳಲ್ಲೊಂದಾದ ಕುಂದೇಶ್ವರ ದೀಪೋತ್ಸವದ ಸಂದರ್ಭದಲ್ಲಿ ಕಲಾತ್ಮಕವಾಗಿ ರೇಖೆಯ ಕ್ಯಾರಿಕೇಚರ್, ವಿವಿಧ ಸ್ಪರ್ಧೆ, ಚಿತ್ರನಿಧಿ, ಕಲಾವಿದರ ಸಂವಾದ, ಜನಸಾಮಾನ್ಯರ ಒಗ್ಗೂಡುವಿಕೆಯೊಂದಿಗೆ ವಿಭಿನ್ನ ರೀತಿಯಲ್ಲಿ ಹಾಸ್ಯ, ನಿಗೂಡತೆ, ಸಂವೇದನಾತ್ಮಕವಾಗಿ ಮನಸೂರೆಗೊಳ್ಳುವ ‘ಕಾರ್ಟೂನ್ ಹಬ್ಬದ ಮೂಲಕ ನಗೆ ಚಟಾಕಿಯೊಂದಿಗೆ ಪ್ರಸ್ತುತ ಪಡಿಸುವ ಈ ಬಾರಿಯ 10 ವರ್ಷದ ಕಾರ‍್ಯಕ್ರಮಕ್ಕೆ ಶುಭಾಷಯದ ಮರಳು ಶಿಲ್ಪ
ಈ ಸಂದರ್ಭದಲ್ಲಿ ‘ಕಾರ್ಟೂನ್ ಹಬ್ಬ’ದ ನೇತಾರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ , ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಮತ್ತು ಬಳಗದವರು ಉಪಸ್ಥಿತರಿದ್ದರು