ಉಡುಪಿ : ಡಿಸೆಂಬರ್ 07:ದ್ರಶ್ಯ ನ್ಯೂಸ್ : ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಮಾರಂಭ- 2023ರ ಉದ್ಘಾಟನಾ ಸಮಾರಂಭ ಡಿ.7 ಇಂದು ಸಂಜೆ 5:30ಕ್ಕೆ ನಡೆಯಲಿದೆ.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ.ಕೆ. ಅಶೋಕ್ ಕಾಮತ್, ಪೂರ್ಣಿಮಾ, ಡಾ.ಜೆ.ಎನ್. ಭಟ್, ಎಂ. ಗಂಗಾಧರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಯಕ್ಷ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.