ಮಂಗಳೂರು, ಡಡಿಸೆಂಬರ್ .5: ವಿವಿಧ ಜಿಲ್ಲೆ, ತಾಲೂಕುಗಳಿಗೆ ಹೊರಡುವ ವೇಗದೂತ, ಸರ್ವಿಸ್ ಸೇರಿದಂತೆ ಖಾಸಗಿ ಬಸ್ಸುಗಳ ರೂಟ್‌ಗಳ ಕನ್ನಡ ನಾಮಫಲಕ ಸ್ಟಿಕರ್ ಅಭಿಯಾನ ಮಂಗಳವಾರ ಇಂದು ಆರಂಭಗೊಂಡಿದ್ದು, ಈ ವಾರಾಂತ್ಯದವರೆಗೆ ಮುಂದುವರಿಯಲಿದೆ.
ಮಂಗಳೂರಿನ ಸಹಾಯಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ವಿಶ್ವನಾಥ್ ನಾಯ್ಕ್ ನೇತೃತ್ವದಲ್ಲಿ ನಗರದ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳಿಗೆ ಕನ್ನಡ ನಾಮಫಲಕ ಸ್ಟಿಕರ್ ಅಳವಡಿಕೆ ಅಭಿಯಾನ ಆರಂಭಗೊಂಡಿತು.
ಬಸ್‌ಗಳ ರೂಂಗಳನ್ನು ಕನ್ನಡದಲ್ಲಿ ನಮೂದಿಸಬೇಕಾಗಿದೆ. ಈ ಬಗ್ಗೆ ಪರಿಶೀಲನೆಯನ್ನು ನಡೆಸಲಾಗುತ್ತದೆ. ಕೆಲವು ಬಸ್ ಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಇದೀಗ ಈ ವಾರಾಂತ್ಯದವರೆಗೆ ಖಾಸಗಿ ಬಸ್ಸುಗಳವರಿಂದಲೇ ಹಣ ಭರಿಸಿಕೊಂಡು ಕನ್ನಡ ನಾಮಫಲಕದ ಸ್ಟಿಕರ್ ಅಳವಡಿಕೆ ಕಾರ್ಯ ನಡೆಯಲಿದೆ. ಮುಂದಿನ ವಾರದಿಂದ ದಂಡ ವಿಧಿಸುವ ಕಾರ್ಯ ನಡೆಯಲಿದೆ’ ಎಂದು ಎಆರ್‌ಟಿಒ ವಿಶ್ವನಾಥ್ ನಾಯ್ಕ್ ತಿಳಿಸಿದರು
ಬಸ್ಸುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲಾಗಿದ್ದರೂ ಬಹುತೇಕ ಖಾಸಗಿ ಬಸ್ಸುಗಳವರು ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ನಿರಂತರವಾಗಿ ಸಂಬಂಧಪಟ್ಟವರಿಗೆ ದೂರು ನೀಡಲಾಗುತ್ತಿದೆ. ಇದೀಗ ಆರ್‌ಟಿಒ ಮೂಲಕ ಈ ಕಾರ್ಯ ಆರಂಭಗೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಅಭಿಪ್ರಾಯಿಸಿದ್ದಾರೆ.