ಕುಂದಾಪುರ:ಡಿಸೆಂಬರ್ 05:ದ್ರಶ್ಯ ನ್ಯೂಸ್ ಬೀಜಾಡಿ ಗ್ರಾಮದ ಕಟ್ಟಡವೊಂದರಲ್ಲಿ ಮೀನು ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದ ಉದಯ (47) ಅವರು ಅಂಗಡಿಯೊಳಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಿಂದ ಬೆಳಗ್ಗೆ ಮೀನು ಅಂಗಡಿಗೆ ಹೋಗುವುದಾಗಿ ಪತ್ನಿಗೆ ತಿಳಿಸಿ ಹೋಗಿದ್ದು, ಕೆಲಸದ ವ್ಯಕ್ತಿ ಅಂಗಡಿ ಬಳಿ ಬಂದು ನೋಡಿದಾಗ ಉದಯ ಮೃತಪಟ್ಟಿದ್ದರು. ಸಾಲಬಾಧೆಯಿಂದ ಜೀವನದಲ್ಲಿ ಜುಗುಪ್ಸೆಗೊಂಡು ಈ ಕೃತ್ಯ ಎಸಗಿರಬಹುದಾಗಿದೆ ಎಂದು ಅವರ ಸಹೋದರ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ನಾಗೇಶ್ ಕುಂದಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ