ಉಡುಪಿ :ಡಿಸೆಂಬರ್ 03 : ದ್ರಶ್ಯ ನ್ಯೂಸ್ :ಶ್ರೀ ಪುತ್ತಿಗೆ ಮಠದಲ್ಲಿ ನಡೆದ ಸ್ವಾಗತ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು , ಅತಿಥಿಗಳಾಗಿ ಬಂದ ಕೃಷ್ಣ ಭಕ್ತರಿಗೆ ಸಕಲ ಸೌಕರ್ಯಗಳನ್ನು ಒದಗಿಸಿ ಕೊಡುವುದು ಕೂಡ ಕೃಷ್ಣನಿಗೆ ಅತ್ಯಂತ ಪ್ರೀತಿಕರವಾದ ಸೇವೆಯೇ ಆಗಿದೆ.
ಆದ್ದರಿಂದ ಕೃಷ್ಣ ಭಕ್ತರಾದ ತಾವೆಲ್ಲರೂ ಈ ಪರ್ಯಾಯೋತ್ಸವದಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡು ಶ್ರಿ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿ ಎಂದು ಅನುಗ್ರಹ ಸಂದೇಶ ನೀಡಿದರು.
ಸಭೆಯ ಅಧ್ಯಕ್ಷರಾಗಿ ಕಾಪು ಶಾಸಕರಾದ ಹಾಗೂ ಸಮಿತಿಯ ಮಹಾ ಪೋಷಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ರವರು ಪಾರ್ಯಾಯೋತ್ಸವಕ್ಕೆ ದಿನ ಗಣನೆ ಆರಂಭವಾಗಿದ್ದು. ನಾವೆಲ್ಲರೂ ಒಗ್ಗಟ್ಟಾಗಿ ಪುತ್ತಿಗೆ ಶ್ರೀಗಳ ಪರ್ಯಾಯವನ್ನು ವೈಭವದಿಂದ ನಡೆಸೋಣ ಎಂದು ತಿಳಿಸಿದರು.
ಪ್ರತಿ ಉಪಸಮಿತಿಯ ಸಂಚಾಲಕರಾದ ಶ್ರೀ ಎಂ ಎಲ್ ಸಾಮಗ, ಶ್ರೀ ಸುಪ್ರಸಾಡ್ ಶೆಟ್ಟಿ ಬೈಕಾಡಿ, ಜಯಕರ ಶೆಟ್ಟಿ ಇಂದ್ರಾಳಿ, ಶ್ರೀ ನಾಗೇಶ ಹೆಗ್ದೆ ರಂಜನ್ ಕಲ್ಕೂರ ರವರು ತಮ್ಮ ಕರ್ತವ್ಯಗಳ ಸಿದ್ದತೆ ಬಗ್ಗೆ ವರದಿ ಒಪ್ಪಿಸಿದರು. ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತಾಡಿದರು.
ಸಮಿತಿಯ ಶ್ರೀ ಪ್ರಸನ್ನ ಆಚಾರ್ಯ, ಶ್ರೀ ಮಟ್ಟಿ ಲಕ್ಷ್ಮೀನಾರಾಯಣ್ ರಾವ್, ಶ್ರೀ ಹರಿಯಪ್ಪ ಕೋಟ್ಯಾನ್, ಶ್ರಿ ಬಾಲಾಜಿ ಯೋಗೀಶ್ ಶೆಟ್ಟಿ, ಶ್ರಿ ಸಂತೋಷ್ ಶೆಟ್ಟಿ ತೆಂಕರಾಗುತ್ತು, ಶ್ರೀ ದಿನೇಶ್ ಪುತ್ರನ್, ಅಲ್ಲದೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶ್ರೀ ಬೆಳಪು ದೇವಿ ಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ರಮೇಶ್ ಭಟ್ ಕೆ. ಸ್ವಾಗತಿಸಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು