ಬೆಂಗಳೂರು : ಡಿಸೆಂಬರ್ 02:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿ.3ರ ನಾಳೆ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಿಸಿದೆ.
ಈ ಬಗ್ಗೆ ಬಿ ಎಂ ಆರ್ ಸಿ ಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಅದರಲ್ಲಿ ನಮ್ಮ ಮೆಟ್ರೋ ನೇರಳೆ ಹಸಿರು ಮಾರ್ಗದ 4 ಟೈರ್ಮಿನಲ್ ಗಳಿಂದ ಸೇವೆ ಸಲ್ಲಿಸುತ್ತಿದ್ದು, ಡಿಸೆಂಬರ್ 3ರಂದು ರಾತ್ರಿ 11:45 ರವರೆಗೆ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಲಭ್ಯವಿದ್ದು, ಡಿಸೆಂಬರ್ 3ರಂದು ಮಧ್ಯಾಹ್ನ 2 ಗಂಟೆಯಿಂದ ಪೇಪರ್ ಟಿಕೆಟ್ ಲಭ್ಯವಿರುತ್ತದೆ. ಡಿಸೆಂಬರ್ ಮೂರರಂದು ನಮ್ಮ ಮೆಟ್ರೋ ಪೇಪರ್ ಟಿಕೆಟ್ ದರ ರೂ.50 ಇದ್ದು, ವಾಟ್ಸಾಪ್ ನಮ್ಮ ಮೆಟ್ರೋ ಆಪ್ ಪೇಟಿಎಂ ಆಪ್ ಮೂಲಕ ಖರೀದಿಸಬಹುದಾಗಿದೆ ಎಂದು ಹೇಳಿದೆ
ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಖರೀದಿಸಿದರೇ ಐದು ರೂಪಾಯಿ ರಿಯಾಯ್ತಿ ಇರಲಿದ್ದು ಟಿ-20 ಕ್ರಿಕೆಟ್ ಪಂದ್ಯ ನಡೆಯುವ ದಿನಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಸ್ಮಾರ್ಟ್ ಕಾರ್ಡ್ ಎಸಿಎಂಸಿ ಕಾರ್ಡ್ ಗಳನ್ನು ಎಂದಿನಂತೆ ಬಳಸಬಹುದಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿ ಜನಸಂದಣಿಯನ್ನು ತಪ್ಪಿಸಿ ಎಂದು ಮನವಿ ಮಾಡಿದೆ.