ಉಡುಪಿ : ಡಿಸೆಂಬರ್ 01: ಡಿಸೆಂಬರ್ 01 ವಿಶ್ವ ಏಡ್ಸ್ ದಿನ -2023’ರ ಪೂರ್ವಭಾವಿಯಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಗ್ರಾಸ್‌ಲ್ಯಾಂಡ್ ಡೆವಲಪರ್ಸ್ ಇವರ ಸಹಯೋಗ ದೊಂದಿಗೆ ಕಾಪು ಕಡಲ ಕಿನಾರೆಯಲ್ಲಿ ಎಚ್‌ಐವಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮಣಿಪಾಲದ ಸ್ಯಾಂಡ್‌ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹಿರೆಬೆಟ್ಟು, ಪುರಂದರ್ ಮಲ್ಪೆ ಇವರು ಏಡ್ಸ್ ಜಾಗೃತಿಗಾಗಿ ಕಾಪು ದೀಪಸ್ಥಂಭದ ಕಡಲ ಕಿನಾರೆಯಲ್ಲಿ ಮರಳು ಶಿಲ್ಪವನ್ನು ರಚಿಸಿದ್ದಾರೆ.
ಸಮುದಾಯದ ಮುಂದಾಳತ್ವದಲ್ಲಿ ಈ ಮಹಾಮಾರಿಯ ನಿರ್ಮೂಲನೆ ಸಾಧ್ಯ ಎಂಬುದು ಇವರ ಮರಳುಶಿಲ್ಪದ ಸಂದೇಶವಾಗಿತ್ತು.