ಉಡುಪಿ: ಡಿಸೆಂಬರ್ 01: ದ್ರಶ್ಯ ನ್ಯೂಸ್ : ಹೆರ್ಗ ಗ್ರಾಮದ ಪೆರ್ಣಂಕಿಲ ಸ್ವರ್ಣ ನದಿಯಲ್ಲಿ ಎರಡು ದಿನಗಳ ಹಿಂದೆ ಈಜಲು ಹೋದ ಯುವಕನೋರ್ವ ತನ್ನ 3 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಳಕೊಂಡಿದ್ದರು.
ಎಷ್ಟು ಹುಡುಕಾಡಿದರೂ ಆವರಿಗೆ ಸರ ಸಿಕ್ಕಿರಲಿಲ್ಲ . ನಂತರ ಎರಡು ದಿನಗಳ ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆಯವರ ಗಮನಕ್ಕೆ ತಂದಾಗ ಅವರು ನದಿಯಲ್ಲಿ ಹುಡುಕಾಟ ನಡೆಸಿ ಸುಮಾರು 30 ಅಡಿ ದೂರ, 25 ಅಡಿ ಆಳದಲ್ಲಿ ಕೆಸರಿನಲ್ಲಿ ಹೂತು ಹೋಗಿರುವ ಸರವನ್ನು ತಂದು ಸಂಬಂಧಿಸಿದವರಿಗೆ ನೀಡಿದ್ದು, ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.