ಬೆಂಗಳೂರು : ನವೆಂಬರ್ 29:ಬೆಂಗಳೂರಿನ ಹಳೆಯ ಹೋಟೆಲ್ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನವು ಡಿಸೆಂಬರ್ 6 ರಿಂದ ಬಂದ್ ಆಗಲಿದೆ. ಎಂದು ರೆಸ್ಟೋರೆಂಟ್ ಮುಂಭಾಗದಲ್ಲಿ ಬ್ಯಾನರ್ ಹಾಕಲಾಗಿದೆ
ಸಾಂಪ್ರದಾಯಿಕ ಉಡುಪಿ ಭಕ್ಷ್ಯಗಳ ಜೊತೆಗೆ ನ್ಯೂ ಕೃಷ್ಣ ಭವನವು 1954 ರಲ್ಲಿ ಪ್ರಾರಂಭವಾಯಿತು. ಕಾಫಿ ಮತ್ತು ಉತ್ತರ ಭಾರತದ ಅಡುಗೆಗೆ ಹೆಚ್ಚು ಹೆಸರುವಾಸಿಯಾಗಿದೆ.
ಇಲ್ಲಿ ಸುಮಾರು 100 ಜನ ಕೆಲಸವನ್ನು ಮಾಡುತ್ತಾರೆ. ಈ ವಯಸ್ಸಿನಲ್ಲಿ ಹೊಸ ಉದ್ಯೋಗವನ್ನು ಹುಡುಕುವುದು ಅಸಾಧ್ಯವಾಗಿದೆ
ಇನ್ನು ಭೀಮಾ ಜ್ಯುವೆಲರ್ಸ್ಗೆ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಶೀಘ್ರದಲ್ಲೇ ಅದು ಈಗಿರುವುದಕ್ಕಿಂತ ಸಂಪೂರ್ಣ ಹೊಸದಾಗಿ ಬರಲಿದೆ ಎಂದು ಮಾಲೀಕರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ‘ಕಳೆದೊಂದು ವರ್ಷದಿಂದ ಮಾತುಕತೆ ನಡೆದಿದ್ದು, ಮಾಲೀಕರು ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದರು.