ಉಡುಪಿ, ನವೆಂಬರ್ 29: ಬಡಗಬೆಟ್ಟು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ, ಮಲಗುವ ಕೋಣೆಯ ಗೋದ್ರೇಜ್‌ನ ಲಾಕರಿನಲ್ಲಿಟ್ಟಿದ್ದ 1) ಅಂದಾಜು 5 ಪವನ್ ತೂಕದ ಚಿನ್ನದ ಕರಿಮಣಿ ಸರ-1, 2) ಅಂದಾಜು 2 ಪವನ್ ತೂಕದ ಚಿನ್ನದ ಚೈನ್-1, 3) ಅಂದಾಜು 1 1/2 ಪವನ್ ತೂಕದ ಚಿನ್ನದ ಸಣ್ಣ ನೆಕ್ಲೇಸ್-1, 4) ಅಂದಾಜು ಒಟ್ಟು 2 ಪವನ್ ತೂಕದ ಚಿನ್ನದ ಉಂಗುರಗಳು-4, 5) ಅಂದಾಜು 3/4 ಪವನ್ ತೂಕದ ಚಿನ್ನದ ಜುಮುಕಿ+ಬೆಂಡೋಲೆ- 1 ಜೊತೆ ಹಾಗೂ ನಗದು ರೂ. 15,500/- ,6) ಅಂದಾಜು 4 ಪವನ್ ತೂಕದ ಚಿನ್ನದ ನೆಕ್ಲೇಸ್-1, 7) ಅಂದಾಜು 3 ಪವನ್ ತೂಕದ ಒಂದು ಜೊತೆ ಚಿನ್ನದ ಬಳೆ, 8) ಅಂದಾಜು 2 ಪವನ್ ತೂಕದ ಒಂದು ಜೊತೆ ಚಿನ್ನದ ಬಳೆ, 9) ಅಂದಾಜು 3/4 ಪವನ್ ತೂಕದ ಚಿನ್ನದ ಒಂದು ಜೊತೆ ಲೋಲಕ+ಬೆಂಡೋಲೆ, 10) ಅಂದಾಜು 1/2 ಪವನ್ ತೂಕದ ಚಿನ್ನದ ಉಂಗುರ-1, 11) ಅಂದಾಜು ಒಟ್ಟು 2 ಪವನ್ ತೂಕದ ಚಿನ್ನದ ಕಿವಿಯೋಲೆ -4 ಜೊತೆ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣಗಳ ಅಂದಾಜು ಒಟ್ಟು ತೂಕ 188 ಗ್ರಾಂ ಆಗಿದ್ದು, ಮೌಲ್ಯ 8,46,000/- ರೂಪಾಯಿ ಹಾಗೂ ಕಳವಾದ ನಗದು ಹಣ 15,500/- ರೂಪಾಯಿ ಸೇರಿ ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 8, 61, 500/- ರೂಪಾಯಿ ಆಗಬಹುದು ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ಕ್ರಮಂಕ 89/2023 ಕಲಂ : 454 380 IPC ಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಬಗ್ಗೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್., ಪಿಎಸ್‌ಐ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ಪುನೀತ್ ಕುಮಾರ್ ಮತ್ತು ಸಿಬ್ಬಂದಿಯವರಾದ ಸತೀಶ್ ಬೆಳ್ಳೆ, ಚೇತನ್, ಆನಂದ, ಎಸ್.ಶಿವಕುಮಾರ್ ರಿಯಾಜ್ ಅಹಮದ್, ವಿಶ್ವನಾಥ ಶೆಟ್ಟಿ, ಕಿರಣ್, ಹೇಮಂತ್ ಕುಮಾರ್, ಓಬಳೇಶ್, ರಾಜೇಂದ್ರರವರ ನ್ನೊಳಗೊಂಡ ತಂಡವು ಪ್ರಕರಣದ ಆರೋಪಿಯಾದ ತೌಸಿಪ್ ಅಹಮದ್ ಎಂಬಾತನನ್ನು ನವೆಂಬರ್ 28ರಂದು ಮಲ್ಲಾರ್‌ನಲ್ಲಿ ವಶಕ್ಕೆ ಪಡೆದು,ಆರೋಪಿತನು ಪ್ರಕರಣದಲ್ಲಿ ಕಳವು ಮಾಡಿದ್ದ ಒಟ್ಟು ರೂ 9,00,500 ಮೌಲ್ಯದ 155 ಗ್ರಾಂ ತೂಕದ ಬಂಗಾರದ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪಡಿ.ಆರ್, ಎಸ್ಸೆಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ಪುನೀತ್ ಕುಮಾರ್ ಮತ್ತು ಸಿಬ್ಬಂದಿ ಸತೀಶ್ ಬೆಳ್ಳೆ ಚೇತನ್, ಆನಂದ, ಎಸ್.ಶಿವಕುಮಾರ್, ರಿಯಾಝ್ ಅಹಮದ್, ವಿಶ್ವನಾಥ ಶೆಟ್ಟಿ, ಕಿರಣ್, ಹೇಮಂತ್ ಕುಮಾರ್, ರಾಜೇಂದ್ರರವರನ್ನೊಳಗೊಂಡ ಓಬಳೇಶ್, ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಈತನ ವಿರುದ್ಧ ಈಗಾಗಲೇ ಬಂಟ್ವಾಳ, ಪಣಂಬೂರು, ಬಜಪೆ ಕಡೆಗಳಲ್ಲಿ ಹಗಲು ದಾಖಲಾಗಿವೆ. ಮನೆಗಳ್ಳತನ ಪ್ರಕರಣಗಳು ಧಾಖಲಾಗಿದೆ