ಉಡುಪಿ : ನವೆಂಬರ್ 29: ದ್ರಶ್ಯ ನ್ಯೂಸ್ : ಕುಬುಡೋ ಬುಡೋಕಾನ್ ಕರಾಟೆ ಡೋ ಅಸೋಸಿಯೇಶನ್ ಕರ್ನಾಟಕ ವತಿಯಿಂದ 6ನೇ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ ಡಿ. 2 ಮತ್ತು 3ರಂದು ಹಿರಿಯಡಕ ಶ್ರೀ ವೀರಭದ್ರ ಸಭಾಂಗಣದಲ್ಲಿ ನಡೆಯಲಿದೆ.
ಡಿ.2ರಂದು ಬೆಳಿಗ್ಗೆ 9ಗಂಟೆಗೆ ಶಿರೂರು ಮಠಾಧೀಶರಾದ ವೇದವರ್ಧನತೀರ್ಥ ಸ್ವಾಮೀಜಿ ಸ್ಪರ್ಧಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಡಿ.3ರಂದು ಬೆಳಿಗ್ಗೆ 9ಗಂಟೆಗೆ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟನೆ ಮಾಡಲಿದ್ದಾರೆ.
ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಕರಾಟೆಪಟುಗಳು ಸೇರಿದಂತೆ 2500 ಕರಾಟೆಪಟುಗಳು ಈ ಸ್ಪರ್ಧಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೊದಲ ದಿನ 13 ವರ್ಷದೊಳಗಿನ ವಯೋಮಾನದವರಿಗೆ ಸ್ಪರ್ಧೆ ನಡೆಯಲಿದೆ.…
12ವರ್ಷದೊಳಗಿನ ಮಕ್ಕಳಿಗೆ ಜೂನಿಯರ್ ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೀನಿಯರ್ ಎಂಬ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಮೊದಲ ದಿನದಂದು 12 ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆಗಳು ನಡೆದರೆ, ಎರಡನೇ ದಿನದಂದು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ಪರ್ಧೆಗಳು ನಡೆಯಲಿವೆ.
ಈ ಬಾರಿ 2500 ಸ್ಪರ್ಧಿಗಳು ಮಾತ್ರವಲ್ಲದೇ, 200ಕ್ಕೂ ಅಧಿಕ ತೀರ್ಪುಗಾರರು ಹಾಗೂ ಸ್ಪರ್ಧಿಗಳ ಹೆತ್ತವರು ಸಹ ಪಾಲ್ಗೊಳ್ಳಲಿದ್ದಾರೆ.