ಮಂಗಳೂರು : ನವೆಂಬರ್ 28: ದ್ರಶ್ಯ ನ್ಯೂಸ್: ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‍ಗಳಲ್ಲಿ ಈಗಾಗಲೇ ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ಆದ್ದರಿಂದ ನಗರದ ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಗಾಢವಾದ ಪರಿಣಾಮಗಳು ಬೀರುತ್ತಿದೆ ಹಾಗೂ ನಗರದಲ್ಲಿ ರೇಬಿಸ್ ಕಾಯಿಲೆಗಳು ಹರಡುವ ಸಂಭವ ಹೆಚ್ಚಾಗಿರುತ್ತದೆ
ಈ ಎಲ್ಲ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯು ಈಗಾಗಲೇ ನಗರದಲ್ಲಿ ಸಾಕು ನಾಯಿಗಳಿಗೆ (Dog licence) ಪರವಾನಿಗೆಯನ್ನು ಪಡೆಯುವಂತೆ ಕ್ರಮಕೈಗೊಳ್ಳಲಾಗಿದೆ.
ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಪಾಲಿಕೆಯಿಂದ (Dog licence) ಪರವಾನಿಗೆ ಪಡೆಯಲು ಅರ್ಜಿ ಪ್ರತಿ ಪಡೆದುಕೊಳ್ಳಬೇಕು. ಸಾಕು ನಾಯಿಗೆ ನೀಡಲಾಗಿರುವ ಲಸಿಕಾ ದಾಖಲೆ, ಮಾಲೀಕರ ಆಧಾರ್ ಕಾರ್ಡ್, ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ, ಸಾಕು ನಾಯಿಯ 2 ಭಾವಚಿತ್ರ ಇತ್ಯಾದಿ ದಾಖಲೆಗಳನ್ನು ಸಲ್ಲಿಸಿ ಪರವಾನಿಗೆಯನ್ನು ಪಡೆದುಕೊಳ್ಳಬೇಕು.
ಅದೇ ರೀತಿ ಸಾಕು ಪ್ರಾಣಿಗಳು ಮತ್ತು ಮರಿಗಳನ್ನು ರಸ್ತೆಯ ಬದಿಗಳಲ್ಲಿ ಬಿಡುವುದು ಹಾಗೂ ಸ್ಥಳೀಯ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವುದು ಕಂಡುಬಂದಲ್ಲಿ ಸಾಕು ಪ್ರಾಣಿಗಳ ಮಾಲೀಕರ ವಿರುದ್ಧ ಪಾಲಿಕೆಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದೆಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.