ಬೆಂಗಳೂರು:ನವೆಂಬರ್ 25:ದ್ರಶ್ಯ ನ್ಯೂಸ್ : ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಮರು ನೇಮಕಾತಿ ಮಾಡಲಾಗಿದೆ.ಎರಡು ತಿಂಗಳ ಅವಧಿಗೆ (2024 ಜನವರಿ 31ರವರೆಗೆ) ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಅವರನ್ನು ಮರುನೇಮಕಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ವಿಸ್ತರಣೆಗೆ ಅವಕಾಶವಿಲ್ಲದ ಕಾರಣ ಹಾಲಿ ಅಧ್ಯಕ್ಷರನ್ನೇ ಮರುನೇಮಕ ಮಾಡಲಾಗಿದೆ. ಇವರ ಜೊತೆಗೆ ಐವರು ಸದಸ್ಯರನ್ನು ಮರು ನೇಮಕ ಮಾಡಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿ ನವೆಂಬರ್ 26ಕ್ಕೆ ಅಂತ್ಯವಾಗುತ್ತಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿದೆ.